ಉಡುಪಿಯ ಕಡಿಯಾಳಿಯಲ್ಲಿ ಗಿಡ ಮೂಲಿಕಾ (ಜಡಿಬೂಟಿ) ದಿನ ಆಚರಿಸಲಾಯಿತು. ಶ್ರೀಪತಿ ಕಾಮತ್ ಜೀ, ಸುರೇಶ್ ಭಕ್ತ, ವೆಂಕಟೇಶ್ ಮೆಹಂದಳೆ, ಕೆ. ರಾಘವೇಂದ್ರ ಭಟ್, ನಾಗರಾಜ್ ಶೇಟ್ ಹಾಗೂ ಸಮಿತಿ ಸದಸ್ಯರು, ಯೋಗ ಶಿಕ್ಷಕರು, ಯೋಗಾರ್ಥಿಗಳು ಇದ್ದರು.
Published on:
Copied
Follow Us
* ಹಿರಿಯ ಯೋಗ ಸಾಧಕ ಶ್ರೀಪತಿ ಕಾಮತ್ ಜೀ ಅನಿಸಿಕೆ
* ಉಡುಪಿ ಕಡಿಯಾಳಿಯಲ್ಲಿ ಗಿಡ ಮೂಲಿಕಾ ದಿನಾಚರಣೆ
ಉಡುಪಿ: ಇತ್ತೀಚೆಗೆ ಆನ್ಲೈನ್ ಮೂಲಕವೂ ಸುಲಭವಾಗಿ ಆಹಾರೋತ್ಪನ್ನಗಳು ಲಭಿಸತೊಡಗಿದೆ. ಅವುಗಳು ಆರೋಗ್ಯಕ್ಕೆ ಎಷ್ಟು ಪೂರಕ ಅಥವಾ ಮಾರಕ ಎಂಬ ಅರಿವಿಲ್ಲದೆ ಜನರೂ ಸೇವಿಸತೊಡಗಿದ್ದಾರೆ. ನಾವು ಸದೃಢವಾಗಿ ಮತ್ತು ಆರೋಗ್ಯದಿಂದ ಇರಲು ನಿತ್ಯವೂ ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳ ಕಷಾಯ ಸೇವಿಸಬೇಕು ಎಂದು ಪತಂಜಲಿ ಶಿರ್ವ ಕಕ್ಷೆಯ ಹಿರಿಯ ಯೋಗ ಸಾಧಕ ಶ್ರೀಪತಿ ಕಾಮತ್ ಜೀ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಪತಂಜಲಿ ಯೋಗ ಸಮಿತಿಯ ಕಡಿಯಾಳಿ ಕಕ್ಷೆಯಲ್ಲಿ ಪತಂಜಲಿ ಯೋಗಪೀಠ ಹರಿದ್ವಾರದ ಸಹ ಸಂಸ್ಥಾಪಕ, ಆಯುರ್ವೇದ ಶಿರೋಮಣಿ ಆಚಾರ್ಯ ಬಾಲಕೃಷ್ಣ ಜೀ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಗಿಡ ಮೂಲಿಕಾ (ಜಡಿಬೂಟಿ) ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪತಂಜಲಿ ಚಿಕಿತ್ಸಾಲಯದ ಸುರೇಶ್ ಭಕ್ತ ಮಾತನಾಡಿ, ರೋಗಿಗಳಿಗೆ ನೀಡಿದ ಮೂಲಿಕಾ ಚಿಕಿತ್ಸೆಯಿಂದಾದ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಭಾರತ್ ಸ್ವಾಭಿಮಾನ್ ಟ್ರಸ್ಟ್ನ ಜಿಲ್ಲಾ ಪ್ರಭಾರಿ ವೆಂಕಟೇಶ್ ಮೆಹಂದಳೆ ಮಾತನಾಡಿ, ಆಚಾರ್ಯ ಬಾಲಕೃಷ್ಣ ಜೀ ಅವರ ಸಾಧನೆಗಳ ಬಗ್ಗೆ ವಿವರಿಸಿದರು.
ಕರ್ನಾಟಕ ರಾಜ್ಯ ಪತಂಜಲಿ ಯೋಗ ಸಮಿತಿ ಸದಸ್ಯ ಕೆ. ರಾಘವೇಂದ್ರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಿಯಾಳಿ ಕಕ್ಷೆಯ ಮುಖ್ಯ ಯೋಗ ಶಿಕ್ಷಕ ನಾಗರಾಜ್ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾ ಪ್ರಭಾರಿಗಳು, ಸಮಿತಿ ಸದಸ್ಯರು, ಮುಖ್ಯ ಯೋಗ ಶಿಕ್ಷಕರು ಹಾಗೂ ವಿವಿಧ ಕಕ್ಷೆಯ ಯೋಗಾರ್ಥಿಗಳು ಪಾಲ್ಗೊಂಡಿದ್ದರು.
"
ನಾವಿರುವ ಪರಿಸರ, ಮನೆಯ ಸಮೀಪದಲ್ಲೇ ಪ್ರಕೃತಿದತ್ತವಾಗಿ ಇಪ್ಪತ್ತಕ್ಕೂ ಅಧಿಕ ಗಿಡಮೂಲಿಕೆಗಳು ಇರುತ್ತವೆ. ಆದರೆ, ಅವುಗಳ ಅರಿವು ಇರುವುದಿಲ್ಲ. ಹಿರಿಯರಿಂದ ಅಥವಾ ತಿಳಿದವರಿಂದ ಅಂತಹ ಮೂಲಿಕೆಗಳ ಪ್ರಯೋಜನ ತಿಳಿದು ಅವುಗಳನ್ನು ಸಂರಕ್ಷಿಸಬೇಕು.