ನಿಲ್ಲಿಸಿದ್ದ ಲಾರಿ ಬೆಂಕಿಗಾಹುತಿ

Crime
Crime
Published on

ಕಾಸರಗೋಡು: ನೀಲೇಶ್ವರ ಚೆರಪುರಂ ಆಲಿಸ್‌ಕಿಳಲ್ ಎಂಬಲ್ಲಿ ನಿಲ್ಲಿಸಿದ್ದ ಚೆರಪುರಂ ಮಣ್ಪುರತ್ ಹೌಸ್‌ನ ಜೋಷಿ ಥೋಮಸ್ ಎಂಬುವರ ಮಾಲೀಕತ್ವದ ಲಾರಿ ಬೆಂಕಿಗೆ ಆಹುತಿಯಾಗಿದೆ.

ಲಾರಿಯ ಕ್ಯಾಬಿನ್, ಇಂಜಿನ್ ಸೇರಿದಂತೆ ಹೆಚ್ಚಿನ ಭಾಗಗಳು ಪೂರ್ಣವಾಗಿ ಸುಟ್ಟುಹೋಗಿವೆ. ಸಮೀಪದಲ್ಲಿ ನಿಲ್ಲಿಸಿದ್ದ ಇತರ ಲಾರಿಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಸ್ಥಳೀಯರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.

ಲಾರಿ ಮಾಲೀಕ ನೀಡಿದ ದೂರಿನನ್ವಯ ನೀಲೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net