ಸರ್ವೀಸ್ ರಸ್ತೆಯಿಲ್ಲದೆ ಪರದಾಟ

 ತಲ್ಲೂರು ಪ್ರವಾಸಿಯಿಂದ ತಲ್ಲೂರು ಬಸ್ ನಿಲ್ದಾಣ ತನಕ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ಇಲ್ಲ.
ತಲ್ಲೂರು ಪ್ರವಾಸಿಯಿಂದ ತಲ್ಲೂರು ಬಸ್ ನಿಲ್ದಾಣ ತನಕ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ಇಲ್ಲ.
Published on
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯಿಂದ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಸ್ಥಳೀಯರ ಬೇಡಿಕೆಗೆ ಹೆದ್ದಾರಿ ಇಲಾಖೆ ಕ್ಯಾರೇ ಎನ್ನುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೋಟೆಲ್ ಪ್ರವಾಸಿಯಿಂದ ತಲ್ಲೂರು ಬಸ್ ನಿಲ್ದಾಣವರೆಗೆ ಹೆದ್ದಾರಿ ಬಿಟ್ಟರೆ ಚರಂಡಿ ಕೂಡ ಇಲ್ಲ. ಪಾದಚಾರಿಗಳು ಹೋಗಲು ಸರಿಯಾದ ಸ್ಥಳವಿಲ್ಲ. ಹೀಗಾಗಿ ಬೈಕ್ ಮತ್ತಿತರ ಲಘು ವಾಹನಗಳು ಹೆದ್ದಾರಿ ಬಿಟ್ಟು ಕೆಳಗೆ ಇಳಿಯುವಂತಿಲ್ಲ. ಪಾದಚಾರಿಗಳು ಹಿಂದೆ ಮುಂದೆ ನೋಡುತ್ತಾ ಭಯದಲ್ಲೇ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ತಲ್ಲೂರು ಪ್ರವಾಸಿ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ಇನ್ನೊಂದು ಕಡೆ ಬರಲು ಯೂ ಟರ್ನ್ ಅವಕಾಶ ಇತ್ತು. ಎರಡು ವರ್ಷಗಳ ಹಿಂದೆ ಅದನ್ನು ಬಂದ್ ವಾಡಿರುವುದರಿಂದ ಪೆಟ್ರೋಲ್ ಬಂಕ್ ಕಡೆ ಬರಲು 3 ಕಿ.ಮೀ. ಕ್ರಮಿಸಬೇಕು. ಹೀಗಾಗಿ ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಿದ್ದಾರೆ.
*ಸರ್ವೀಸ್ ರಸ್ತೆ ಇಲ್ಲ: ಹೆವ್ಮಾಡಿ ಬಸ್ ನಿಲ್ದಾಣದಿಂದ ಸಂತೋಷ ನಗರ, ಜಾಲಾಡಿ ಕಡೆ ಹೋಗುವ ವಾಹನಗಳಿಗೆ ಸರ್ವೀಸ್ ರಸ್ತೆ ಇಲ್ಲದೆ ತಲ್ಲೂರುವರೆಗೆ ಹೋಗಿ ವಾಪಸ್ ಬರಬೇಕಿರುವುದರಿಂದ ವಾಹನಗಳು ರಾ.ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ. ಮೂವತ್ತು ಮೂಡಿಯಿಂದ ಹೆವ್ಮಾಡಿ ಲಾಸ್ಟ್ ಸ್ಟಾಪ್‌ಗೆ ಹೋಗುವವರು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ತ್ರಾಸಿ ಬೀಚ್‌ನಿಂದ ಬಸ್ ನಿಲ್ದಾಣ ಕಡೆಗೆ ಬರುವ ವಾಹನಗಳು ಮರವಂತೆ ದೇವಸ್ಥಾನ ಬಳಿ ಯೂಟರ್ನ್ ತೆಗೆದುಕೊಳ್ಳಬೇಕಿರುವುದರಿಂದ ವಿರುದ್ಧ ದಿಕ್ಕಿನಲ್ಲಿ ತ್ರಾಸಿ ಬಸ್ ನಿಲ್ದಾಣದ ಕಡೆ ಸಂಚರಿಸುತ್ತಿರುವುದು ಕಉಡುಬರುತ್ತಿದೆ.

ಭರವಸೆಗೆ ಸೀಮಿತ ಅಂಡರ್‌ಪಾಸ್

ತ್ರಾಸಿ, ಮುಳ್ಳಿಕಟ್ಟೆ, ಹೆವ್ಮಾಡಿ ಹಾಗೂ ತಲ್ಲೂರಿನಲ್ಲಿ ಅಂಡರ್‌ಪಾಸ್ ಮಂಜೂರಾಗಿದೆ ಎಂದು ಹೇಳಿ ವರ್ಷಗಳೇ ಕಳೆದರೂ ಕಾಮಗಾರಿ ಮರೀಚಿಕೆಯಾಗಿದೆ. ಜನಪ್ರತಿನಿಧಿಗಳ ನೀಡಿದ ಭರವಸೆ ಕಡತದಲ್ಲಿ ವಾತ್ರ ಉಳಿದುಕೊಂಡಿದ್ದು, ಕಾಮಗಾರಿ ಯಾವಾಗ ಪ್ರಾರಂಭ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ತಲ್ಲೂರು ಬಸ್ ನಿಲ್ದಾಣದಿಂದ ಪ್ರವಾಸಿ ಪೆಟ್ರೋಲ್ ಬಂಕ್‌ವರೆಗೆ ಸರ್ವೀಸ್ ರಸ್ತೆ ನಿರ್ಮಾಣ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಅಂಡರ್‌ಪಾಸ್ ಕಾಮಗಾರಿ ಭರವಸೆಯಾಗಿಯೇ ಉಳಿದಿದೆ. ತಲ್ಲೂರು, ಹೆವ್ಮಾಡಿ, ಮುಳ್ಳಿಕಟ್ಟೆ ಹಾಗೂ ತ್ರಾಸಿಯಲ್ಲಿ ಕನಿಷ್ಠ ಸರ್ವೀಸ್ ರಸ್ತೆಯನ್ನಾದರೂ ತುರ್ತು ನಿರ್ಮಿಸಬೇಕಿದೆ. ಇಲ್ಲದಿದ್ದರೆ ಇನ್ನಷ್ಟು ಅವಾಯಕ ಜೀವಗಳು ಬಲಿಯಾವುದರಲ್ಲಿ ಅನುವಾನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net