ಮೇಲಾಧಿಕಾರಿಗಳ ಒತ್ತಡ, ಮಾನಸಿಕ ಕಿರುಕುಳ ತಪ್ಪಿಸಿ

ಮುಕ್ತಂ ಹುಸೇನ್​ ಕರಡಿಗುಡ್ಡ ಸಾವಿನ ಕುರಿತಾಗಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜಿಪಂ ಸಿಇಒ ಪ್ರತೀಕ್​ ಬಾಯಲ್​ ಮೂಲಕ ಸರ್ಕಾರಕ್ಕೆ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿತು. ದಯಾನಂದ್​ ಬೆನ್ನೂರು, ಫರ್ಜಾನಾ ಎಂ., ಹರೀಶ್​ ಶೆಟ್ಟಿ, ಅನಿಲ್​ ಶೆಟ್ಟಿ, ರಾಘವೇಂದ್ರ ಪ್ರಭು, ಜಯರಾಮ ಶೆಟ್ಟಿ, ಸುರೇಶ್​ ಇತರರಿದ್ದರು.
ಮುಕ್ತಂ ಹುಸೇನ್​ ಕರಡಿಗುಡ್ಡ ಸಾವಿನ ಕುರಿತಾಗಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜಿಪಂ ಸಿಇಒ ಪ್ರತೀಕ್​ ಬಾಯಲ್​ ಮೂಲಕ ಸರ್ಕಾರಕ್ಕೆ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿತು. ದಯಾನಂದ್​ ಬೆನ್ನೂರು, ಫರ್ಜಾನಾ ಎಂ., ಹರೀಶ್​ ಶೆಟ್ಟಿ, ಅನಿಲ್​ ಶೆಟ್ಟಿ, ರಾಘವೇಂದ್ರ ಪ್ರಭು, ಜಯರಾಮ ಶೆಟ್ಟಿ, ಸುರೇಶ್​ ಇತರರಿದ್ದರು.
Published on

* ಜಿಲ್ಲಾಧ್ಯಕ್ಷ ದಯಾನಂದ್​ ಬೆನ್ನೂರು ಆಗ್ರಹ

* ಪಿಡಿಒ ಮುಕ್ತಂ ಹುಸೇನ್​ ಸಾವಿನ ತನಿಖೆಗೆ ಆಗ್ರಹ

* ಜಿಪಂ ಸಿಇಒ ಪ್ರತೀಕ್​ ಬಾಯಲ್​ಗೆ ಮನವಿ

ಉಡುಪಿ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಮೇಲೆ ಹಿರಿಯ ಅಧಿಕಾರಿಗಳಿಂದ ಅಮಾನವೀಯ ವರ್ತನೆ, ಅತಿಯಾದ ಕಾರ್ಯದ ಒತ್ತಡ ಹಾಗೂ ಮಾನಸಿಕ ಕಿರುಕುಳ ಹೆಚ್ಚುತ್ತಲಿದೆ. ಈ ಕಾರಣದಿಂದಾಗಿಯೇ ಗದಗ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಪಂನ ಪಿಡಿಒ ಮುಕ್ತಂ ಹುಸೇನ್​ ಕರಡಿಗುಡ್ಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಕುರಿತಾಗಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಯಾನಂದ್​ ಬೆನ್ನೂರು ಆಗ್ರಹಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಕಚೇರಿಗೆ ನಿಯೋಗದೊಂದಿಗೆ ತೆರಳಿ ಸಿಇಒ ಪ್ರತೀಕ್​ ಬಾಯಲ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ಮುಕ್ತಂ ಹುಸೇನ್​ ಅವರು ಅತಿಯಾದ ಕೆಲಸದ ಒತ್ತಡ, ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಲೋಕಾಯುಕ್ತ ತನಿಖೆ ಹಾಗೂ ಅನೇಕ ತಿಂಗಳಿಂದ ವೇತನವೂ ಇಲ್ಲದೆ ಬೇಸತ್ತು ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಾದರೂ ಪಿಡಿಒಗಳ ಬಾಕಿ ವೇತನ ಬಿಡುಗಡೆ, ಮಾನಸಿಕ ಕಿರುಕಳ ತಡೆ, ಆಯುಕ್ತಾಲಯ, ಜಿಪಂ ಮತ್ತು ತಾಪಂ ಕಚೇರಿ ಸಿಬ್ಬಂದಿಯ ಕಡ್ಡಾಯ ವರ್ಗಾವಣೆ, ಒತ್ತಡ ರಹಿತ ಕೆಲಸದ ವಾತಾವರಣ, ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡುವುದನ್ನು ನಿಲ್ಲಿಸಬೇಕು ಎಂದು ವಿನಂತಿಸಿದರು.
ಕಾಲಮಿತಿಯೊಳಗೆ ತನಿಖೆ ಮಾಡುವುದು, ಮೀನಾಕ್ಷಿ ಸುಂದರಂ ಸಮಿತಿಯ ವರದಿ ಜಾರಿ, ದಾಖಲೆ ರಹಿತ ಮತ್ತು ಆನ್​ಲೈನ್​ ಎಂಐಎಸ್​ ವರದಿ ಆಧಾರದ ದೂರುಗಳಿಗೆ ಇಲಾಖಾ ವಿಚಾರಣೆ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಂಘ ನೀಡಿದೆ. ಅವುಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಂದ ಜಿಲ್ಲಾ ಘಟಕದ ಉಪಾಧ್ಯೆ ಫರ್ಜಾನಾ ಎಂ., ರಾಜ್ಯ ಪರಿಷತ್​ ಸದಸ್ಯ ಹರೀಶ್​ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರಾದ ಅನಿಲ್​ ಶೆಟ್ಟಿ, ರಾಘವೇಂದ್ರ ಪ್ರಭು, ಸಂಘಟನಾ ಕಾರ್ಯದರ್ಶಿ  ಜಯರಾಮ ಶೆಟ್ಟಿ, ಉಡುಪಿ ತಾಲೂಕು ಪಿಡಿಒ ಸಂಘದ ಅಧ್ಯಕ್ಷ ಸುರೇಶ್​, ಕಾರ್ಕಳ ತಾಲೂಕು ಅಧ್ಯಕ್ಷ ಪ್ರತಾಪ ಶೆಟ್ಟಿ, ಬ್ರಹ್ಮಾವರ ತಾಲೂಕಿನ ಉಪಾಧ್ಯಕ್ಷ  ಪ್ರಭಾಶಂಕರ್​ ಪುರಾಣಿಕ್​, ಪಿಡಿಒಗಳಾದ ಸಂದೇಶ್​ ಶೆಟ್ಟಿ, ಆಶಾಲತಾ, ಮೆಲ್ವಿನ್​ ಭಾಂಜಿ, ಸುಧಾಕರ್​ ಶೆಟ್ಟಿ, ರವಿರಾಜ್​, ಅನುಪಮಾ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net