ಅಪಾಯದ ಮಟ್ಟದಲ್ಲಿ ಪಂಪಾ ನದಿ

pampa river
pampa river
Published on

ಕುಂಬಳೆ: ಭಾರಿ ಮಳೆಯಿಂದ ಪಂಪಾ ನದಿ ಉಕ್ಕೇರುತ್ತಿದ್ದು, ಶಬರಿಮಲೆಗೆ ಭೇಟಿ ಮುಂದೂಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿ ಭಕ್ತರಲ್ಲಿ ವಿನಂತಿಸಿದೆ.

ಆ.2 ಮತ್ತು 3ರಂದು ಶಬರಿಮಲೆ ದೇವಸ್ಥಾನವು ನಿರಪುತ್ತರಿ ಸಮಾರಂಭಗಳಿಗಾಗಿ ತೆರೆಯಲ್ಪಡುವ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿಯು ಭಕ್ತರನ್ನು ಯಾತ್ರೆ ಮುಂದೂಡುವಂತೆ ವಿನಂತಿಸಿದೆ. ಆಗಸ್ಟ್ ತಿಂಗಳಿನಲ್ಲಿಯೇ ಸಿಂಹಮಾಸ ಪೂಜೆಗಳು ಮತ್ತು ಓಣಂಗೆ ಸಂಬಂಧಿಸಿದ ಪೂಜೆಗಳಿಗಾಗಿ ದೇವಸ್ಥಾನವನ್ನು ತೆರೆಯಲಾಗುತ್ತಿದ್ದು, ಭಕ್ತರು ದರ್ಶನಕ್ಕಾಗಿ ಈ ಸಮಯ ಆಯ್ಕೆ ಮಾಡಬಹುದು ಎಂದು ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net