ವಿದ್ಯಾರ್ಥಿ ಜೀವನ ಅತ್ಯಮೂಲವಾದದ್ದು

 ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿಯ ಅಸಿಸ್ಟೆಂಟ್ ಜನರಲ್ ವ್ಯಾನೇಜರ್ ರಮೇಶ್ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಆನಂದ್ ಸಿ.ಕುಂದರ್, ಪ್ರೊ.ರಾಜೇಂದ್ರ ಎಸ್.ನಾಯಕ್, ಸುರೇಶ್ ಪೂಜಾರಿ ಮೊದಲಾದವರಿದ್ದರು.
ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿಯ ಅಸಿಸ್ಟೆಂಟ್ ಜನರಲ್ ವ್ಯಾನೇಜರ್ ರಮೇಶ್ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಆನಂದ್ ಸಿ.ಕುಂದರ್, ಪ್ರೊ.ರಾಜೇಂದ್ರ ಎಸ್.ನಾಯಕ್, ಸುರೇಶ್ ಪೂಜಾರಿ ಮೊದಲಾದವರಿದ್ದರು.
Published on
ಕೋಟ: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನ ಎಂಬುವುದು ಮಹತ್ತರವಾದ ಟ್ಟ. ಈ ಆರಂಭಿಕ ಶೈಕ್ಷಣಿಕ ದಿನಗಳನ್ನು ನೈಜವಾಗಿ ಸದ್ಬಳಕೆ ವಾಡಿಕೊಳ್ಳಿ ಎಂದು ಉದ್ಯಮಿ ಆನಂದ್ ಸಿ.ಕುಂದರ್ ಹೇಳಿದರು.
ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಗೀತಾನಂದ ಫೌಂಡೇಶನ್ ವತಿಯಿಂದ ಕೊಡವಾಡಿದ ವಿದ್ಯಾನಿಧಿಯನ್ನು ಹಸ್ತಾಂತರಿಸಿ ವಾತನಾಡಿದರು.
ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ವತಿಯಿಂದ ವಿದ್ಯಾನಿಧಿ ಹಸ್ತಾಂತರಿಸಲಾಯಿತು. ಉಪನ್ಯಾಸಕಿ ಡಾ.ಸುನಿತಾ ವಿ., ಸುಬ್ರಹ್ಮಣ್ಯ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದರು. ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿಯ ಅಸಿಸ್ಟೆಂಟ್ ಜನರಲ್ ವ್ಯಾನೇಜರ್ ರಮೇಶ್ ವೈದ್ಯ ಅವರನ್ನು ಗೌರವಿಸಲಾಯಿತು.
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸವಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಮತಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಮೇಶ್ ಆಚಾರ್, ಐಕ್ಯುಎಸಿ ಸಂಚಾಲಕ ಪ್ರೊ.ಸುಬ್ರಹ್ಮಣ್ಯ, ರಕ್ಷಕ-ಶಿಕ್ಷಕ ಸಂ ಅಧ್ಯಕ್ಷ ಸುರೇಶ್ ಪೂಜಾರಿ ಹಾಗೂ ಹಳೇ ವಿದ್ಯಾರ್ಥಿ ಸಂ ಕಾರ್ಯದರ್ಶಿ ಪ್ರಸಾದ್ ಬಿಲ್ಲವ, ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಭಟ್, ವಿದ್ಯಾರ್ಥಿ ಸಂದ ಪದಾಧಿಕಾರಿಗಳಾದ ಪ್ರೀತಿ, ಸಾಗರ್, ಸುಪ್ರಿತಾ, ಸೃಷ್ಟಿ ಚಂದನ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶ್ರದ್ಧಾ ಮತ್ತು ಆಕಾಶ್ ಉಪಸ್ಥಿತರಿದ್ದರು.
ಪ್ರೊ.ಶಂಕರ ನಾಯ್ಕ ಬಿ. ಸ್ವಾಗತಿಸಿದರು. ಪ್ರೊ.ರಾಜೇಂದ್ರ ಎಸ್.ನಾಯಕ್ ವಾರ್ಷಿಕ ವರದಿ ವಾಚಿಸಿದರು. ಅಫಿಪಾ ಆಲ್ಫಿಯಾ ನಿರೂಪಿಸಿದರು. ಸೌಮ್ಯಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net