ದೇವರ ಆರಾಧನೆಯಿಂದ ಬದುಕು ಬಂಗಾರ

ಉಡುಪಿಯ ಕರ್ಣಾಟಕ ಬ್ಯಾಂಕ್​ ಶಾಖೆಯಲ್ಲಿ ವೇದವರ್ಧನ ತೀರ್ಥ ಶ್ರೀಪಾದರ ಪಾದಪೂಜೆ ನೆರವೇರಿಸಲಾಯಿತು. ರಾಘವೇಂದ್ರ ಎಸ್​. ಭಟ್, ಪ್ರದೀಪಕುಮಾರ್​ ಪಂಜ, ಬಾಲಕೃಷ್ಣ ಅಲ್ಸೆ, ಜೀವನ್​ ದಾಸ್​ ನಾರಾಯಣ್​, ಹರೀಶ್​ ಎಚ್​.ವಿ., ರಾಜಾ ಬಿ.ಎಸ್​., ಚಂದ್ರಶೇಖರ್​, ಶಾಮ್​ ಕೆ., ಪಲ್ಲವಿ ಟಿ.ಎಸ್​. ಇತರರಿದ್ದರು.
ಉಡುಪಿಯ ಕರ್ಣಾಟಕ ಬ್ಯಾಂಕ್​ ಶಾಖೆಯಲ್ಲಿ ವೇದವರ್ಧನ ತೀರ್ಥ ಶ್ರೀಪಾದರ ಪಾದಪೂಜೆ ನೆರವೇರಿಸಲಾಯಿತು. ರಾಘವೇಂದ್ರ ಎಸ್​. ಭಟ್, ಪ್ರದೀಪಕುಮಾರ್​ ಪಂಜ, ಬಾಲಕೃಷ್ಣ ಅಲ್ಸೆ, ಜೀವನ್​ ದಾಸ್​ ನಾರಾಯಣ್​, ಹರೀಶ್​ ಎಚ್​.ವಿ., ರಾಜಾ ಬಿ.ಎಸ್​., ಚಂದ್ರಶೇಖರ್​, ಶಾಮ್​ ಕೆ., ಪಲ್ಲವಿ ಟಿ.ಎಸ್​. ಇತರರಿದ್ದರು.
Published on

* ವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಚನ

* ಕರ್ಣಾಟಕ ಬ್ಯಾಂಕ್​ ಉಡುಪಿ ಶಾಖೆಯಲ್ಲಿ ಪಾದಪೂಜೆ

ಉಡುಪಿ: ಬ್ಯಾಂಕ್​ಗಳೆಂದರೆ ಲಕ್ಷ್ಮೀ ಆರಾಧಕರ ಕೇಂದ್ರವಿದ್ದಂತೆ. ಲಕ್ಷ್ಮೀ ಅನುಗ್ರಹ ಆಗಬೇಕಾದರೆ ಶ್ರೀಮನ್ನಾರಾಯಣ ಅನುಗ್ರಹಿಸಬೇಕು. ಕರ್ಣಾಟಕ ಬ್ಯಾಂಕ್​ನವರ ಶ್ರೀಕೃಷ್ಣ ಸೇವೆಯಿಂದ ಖಂಡಿತ ಮುಂದಿನ ದಿನಗಳಲ್ಲಿ ಬ್ಯಾಂಕ್​ ಇನ್ನಷ್ಟು ಸಾಧನೆಯ ಉತ್ತುಂಗಕ್ಕೆ ಏರಲಿದೆ. ಲಕ್ಷ್ಮೀ (ಎಲ್​), ಗಾಡ್​ (ಜಿಒಡಿ) ಜತೆಗೆ ಸೇರಿದಾಗ ಮಾತ್ರ ಗೋಲ್ಡ್​ ಆಗುತ್ತದೆ. ದೇವರ ಆರಾಧನೆಯಿಂದ ಬದುಕು ಬಂಗಾರವಾಗುತ್ತದೆ ಎಂದು ಭಾವೀ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.
ಕರ್ಣಾಟಕ ಬ್ಯಾಂಕ್​ನ ಉಡುಪಿಯ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ದೇವರ ಕೃಪೆ ಅಗತ್ಯ

ಕರ್ಣಾಟಕ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ  ರಾಘವೇಂದ್ರ ಶ್ರೀನಿವಾಸ್​ ಭಟ್​ ಮಾತನಾಡಿ, ಶ್ರೀಕೃಷ್ಣನ ಮಠದೊಂದಿಗೆ ಬ್ಯಾಂಕ್​ನ ಸಂಬಂಧ 102 ವರ್ಷಗಳಿಂದ ಇದ್ದು, ಅದು ಇನ್ನಷ್ಟು ಪಕ್ವವಾಗುತ್ತಲೇ ಇದೆ. ಮೊದಲು ಉಡುಪಿ ರಥಬೀದಿ ಶಾಖೆಯಲ್ಲಿ ಪರ್ಯಾಯ ಸಂದರ್ಭದಲ್ಲಿ ನೆರವೇರಿಸುತ್ತಿದ್ದ ಪಾದಪೂಜೆಯನ್ನು ಪ್ರಾದೇಶಿಕ ಕಚೇರಿ ಆರಂಭಗೊಂಡ ನಂತರ ಇಲ್ಲಿಯೇ ನಡೆಸುತ್ತಿದ್ದೇವೆ. ಬ್ಯಾಂಕ್​ನ ಸಮಸ್ತ ಸೇವೆಗಳೂ ಜನಪರವಾಗಿವೆ. ನಮ್ಮ ಎಲ್ಲ ಕಾರ್ಯಕ್ರಮಗಳಿಗೂ ದೇವರ ಅನುಗ್ರಹ ಬೇಕು ಎಂದರು.
ಬ್ಯಾಂಕ್​ನ ಅಧ್ಯಕ್ಷ ಪ್ರದೀಪಕುಮಾರ್​ ಪಂಜ, ನಿರ್ದೇಶಕರಾದ ಬಾಲಕೃಷ್ಣ ಅಲ್ಸೆ, ಜೀವನ್​ ದಾಸ್​ ನಾರಾಯಣ್​, ಹರೀಶ್​ ಎಚ್​.ವಿ., ಬ್ಯಾಂಕ್​ನ ಸಿಒಒ ರಾಜಾ ಬಿ.ಎಸ್​., ಸಿಬಿಒ ಚಂದ್ರಶೇಖರ್​, ಬ್ಯಾಂಕ್​ನ ಕಂಪನಿ ಸೆಕ್ರೆಟರಿ ಶಾಮ್​ ಕೆ., ಮಹಾಪ್ರಬಂಧಕರಾದ ಜಯನಾಗರಾಜ್​ ರಾವ್​, ರಘುರಾಮ್​ ಎಚ್​.ಎಸ್​., ಶ್ರೀಧರ್​, ಉಪ ಮಹಾಪ್ರಬಂಧಕರಾದ ಗೋಪಾಲಕೃಷ್ಣ ಸಾಮಗ, ವಾದಿರಾಜ್​ ಕೆ., ಉಡುಪಿ ವಲಯದ ಸಹಾಯಕ ಮಹಾಪ್ರಬಂಧಕ ರಮೇಶ್​ ವೈದ್ಯ, ಬ್ಯಾಂಕ್​ನ ಸಾರ್ವಜನಿಕ ಸಂಪರ್ಕಾಧಿಕಾರಿ ಪಲ್ಲವಿ ಟಿ.ಎಸ್​., ಎಂಪ್ಲಾಯೀಸ್​ ಅಸೋಸಿಯೇಷನ್​ನ ಜನರಲ್​ ಸೆಕ್ರೆಟರಿ ಫಣೀಂದ್ರ, ಉಡುಪಿ ನಗರದ ಶಾಖಾ ಸಿಬ್ಬಂದಿ, ನಿವೃತ್ತ ಅಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net