ಸಾಕುನಾಯಿಗಳ ನೋಂದಣಿಗೆ ಮಾಲೀಕರ ಆಧಾರ್

ಎಲ್ಲೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯನ್ನು ಅಧ್ಯಕ್ಷ ರವಿರಾಜ್ ರಾವ್ ಉದ್ಘಾಟಿಸಿದರು.
ಎಲ್ಲೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯನ್ನು ಅಧ್ಯಕ್ಷ ರವಿರಾಜ್ ರಾವ್ ಉದ್ಘಾಟಿಸಿದರು.
Published on

ವಿಜಯವಾಣಿಸುದ್ದಿಜಾಲ ಪಡುಬಿದ್ರಿ

ಸರ್ವೋಚ್ಚನ್ಯಾಯಾಲಯದ ಆದೇಶದಂತೆ ಬೀದಿನಾಯಿಗಳಹಾವಳಿ ನಿಯಂತ್ರಣಕ್ಕೆ ಪಶುಸಂಗೋಪನೆಇಲಾಖೆ ಸಹಯೋಗದಲ್ಲಿ ಗ್ರಾಪಂನಿಂದಕಟ್ಟು ನಿಟ್ಟಿನ ಕ್ರಮಗಳನ್ನುಕೈಗೊಳ್ಳಲಾಗುವುದು.ಸಾಕುನಾಯಿಗಳೇಬೀದಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ನಾಯಿಗಳನ್ನುಗುರುತಿಸುವ ಸಲುವಾಗಿ ಮಾಲೀಕರಆಧಾರ್ ಕಾರ್ಡ್ ಸಹಿತ ಸಾಕುನಾಯಿಗಳನೋಂದಣಿಗೆ ಮುಂದಿನ ದಿನಗಳಲ್ಲಿಗ್ರಾಮ ಪಂಚಾಯಿತಿ ಮುಂದಾಗಲಿದೆಎಂದು ಎಲ್ಲೂರು ಗ್ರಾಪಂ ಪಿಡಿಒಪ್ರದೀಪ್ ತಿಳಿಸಿದರು.

ಎಲ್ಲೂರುಗ್ರಾಪಂ ಸಭಾಭವನದಲ್ಲಿ ಗುರುವಾರನಡೆದ ಗ್ರಾಪಂನ 2025-26ನೇಸಾಲಿನ ಪ್ರಥಮ ಗ್ರಾಮಸಭೆಯಲ್ಲಿಮಾತನಾಡಿದರು.

ಬೀದಿನಾಯಿಗಳಆರೈಕೆಗೆ ಜಾಗ ಗುರುತು

ಜಿಲ್ಲಾಡಳಿತವುಬೀದಿ ನಾಯಿಗಳ ಹಾವಳಿ ತಡೆಯಲುಗ್ರಾಪಂ ಪಿಡಿಒ ಅವರನ್ನು ನೋಡಲ್ಅಧಿಕಾರಿಯನ್ನಾಗಿಸಿ ಯೋಜನೆರೂಪಿಸಿದೆ.ಬೀದಿನಾಯಿಗಳಆರೈಕೆಗಾಗಿ ಈಗಾಗಲೇ ಶಿರ್ವಗ್ರಾಮದಲ್ಲಿ ಒಂದು ಎಕರೆ ಜಮೀನನ್ನುಗುರುತಿಸಿಸಲಾಗಿದೆ.ಸಾಕುನಾಯಿಗಳನ್ನುಮಾಲೀಕರು ಬೀದಿಗೆ ಬಿಡದೆ ಬಂದೋಬಸ್ತ್ಮಾಡಬೇಕು ಎಂದರು.

ಹಳೇವಿದ್ಯುತ್ ತಂತಿ ಬದಲಿಸಿ

ಗ್ರಾಪಂವ್ಯಾಪ್ತಿಯಲ್ಲಿ ಹಲವು ದಶಗಳಿಗಿಂದಲೂಹಳೆಯದಾದ ವಿದ್ಯುತ್ ತಂತಿಗಳನ್ನುಬದಲಾಯಿಸದೆ ಸಮಸ್ಯೆಯಾಗುತ್ತಿದೆಎಂದು ಸದಸ್ಯ ಯಶವಂತ ಶೆಟ್ಟಿದೂರಿದರು.ಇದಕ್ಕುತ್ತರಿಸಿದಮೆಸ್ಕಾಂ ಸಹಾಯಕ ಇಂಜಿನಿಯರ್ಎಂ.ಹುಸೇನ್,ಈಗಾಗಾಲೇಗ್ರಾಪಂ ವ್ಯಾಪ್ತಿಯ ಹಳೆಯ ತಂತಿಗಳಬದಲಾವಣೆಗೆ 2.5ಕೋಟಿರೂ.ಅಂದಾಜುಪಟ್ಟಿ ತಯಾರಿಸಿ ಪ್ರಸ್ತಾವನೆಸಲ್ಲಿಸಲಾಗಿದೆ.ಅನುದಾನಮಂಜೂರಾದ ಕೂಡಲೇ ತಂತಿ ಬದಲಾವಣೆಗೆಕ್ರಮವಹಿಸಲಾಗುವುದು.ದಳಂತ್ರಕೆರೆಮಧ್ಯಭಾಗದಲ್ಲಿ ಹಾದುಹೋಗಿರುವವಿದ್ಯುತ್ ತಂತಿಗಳನ್ನು ಶೀಘ್ರವೇಸ್ಥಳಾಂತರಿಸಲಾಗುವುದು.ಕುಕ್ಕಿಕಟ್ಟೆ-ಮಾಣಿಯೂರುಮಠ ಸಂಪರ್ಕ ರಸ್ತೆಯಲ್ಲಿ ಬೀದಿದೀಪತೆರವು ಮಾಡಿದ್ದು ಹೊಸ ಬೀದಿದೀಪಗಳನ್ನುಹಾಕಲಾಗುವುದು ಎಂದರು.

ಗ್ರಾಪಂಅಧ್ಯಕ್ಷ ರವಿರಾಜ್ ರಾವ್ ಸಭೆಯಅಧ್ಯಕ್ಷತೆ ವಹಿಸಿದ್ದರು.ಮುದರಂಗಡಿಪ್ರಾಥಮಿಕ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯಪ್ರಭು,ಪಶುಸಂಗೋಪನೆಇಲಾಖೆಯ ವಸಂತ ಕುಮಾರ್,ಅಂಗನವಾಡಿಮೇಲ್ವಿಚಾರಕಿ ಫಿಲೋಮಿನಾ,ಸಮಾಜಕಲ್ಯಾಣ ಇಲಾಖೆ ಬಸವರಾಜ್,ಪೊಲೀಸ್ಇಲಾಖೆ ರಮೇಶ್,ಅಂಚೆಇಲಾಖೆಯ ವಾಣಿ ಎಸ್.ರಾವ್ಮಾಹಿತಿ ನೀಡಿದರು. ಮಾರ್ಗದರ್ಶಿಅಧಿಕಾರಿ ಶ್ರೀಕಾಂತ್ ಗುನಗ,ಗ್ರಾಪಂಉಪಾಧ್ಯಕ್ಷೆ ಉಷಾ,ಸದಸ್ಯರುಉಪಸ್ಥಿತರಿದ್ದರು.ದ್ವಿತೀಯದರ್ಜೆ ಲೆಕ್ಕ ಸಹಾಯಕ ಶಿವರಾಮ್ವರದಿ ಮಂಡಿಸಿ,ನಿರೂಪಿಸಿದರು.

ಅದಮಾರಿನಲ್ಲಿಕ್ರೀಡಾಂಗಣ ನಿರ್ಮಾಣಕ್ಕೆ ನಿರ್ಣಯ

ಅದಮಾರಿನಲ್ಲಿರುವಪರಿಶಿಷ್ಟ ಜಾತಿ ಕಾಲನಿಯಮಧ್ಯಭಾಗದಲ್ಲಿರುವ ಎರಡು ಎಕರೆಸರ್ಕಾರಿ ಜಮೀನನ್ನು ತೆಂಕಗ್ರಾಮದಲ್ಲಿರುವ ಅದಮಾರು ಮಠದಹೆಸರಿನಲ್ಲಿ ಮೀಸಲಿರಿಸಿರುವುದಕ್ಕೆಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು,ಎಲ್ಲೂರುಗ್ರಾಮದ ಈ ಜಮೀನನ್ನು ಗ್ರಾಮದಕ್ರೀಡಾಂಗಣವಾಗಿ ಬಳಕೆ ಮಾಡಲುನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.ಈಗಾಗಲೇಗ್ರಾಪಂ ಸಾಮಾನ್ಯ ಸಭೆಯಲ್ಲಿ ಈಜಮೀನನ್ನು ಕ್ರೀಡಾಂಗಣಕ್ಕಾಗಿಮೀಸಲಿರಿಸುವಂತೆ ತಹಸೀಲ್ದಾರ್ಹಾಗೂ ಜಿಲ್ಲಾಧಿಕಾರಿಗೆ ಮನವಿಮಾಡಲಾಗಿದೆ.

ಗ್ರಾಮಸಭೆನಿರ್ಣಯದ ವರದಿಯನ್ನು ಜಿಲ್ಲಾಧಿಕಾರಿಯವರಿಗೆಮತ್ತೆ ನೀಡಲಾಗುವುದು ಎಂದು ಪಿಡಿಒಪ್ರದೀಪ್ ತಿಳಿಸಿದರು.


ಬಯೋಡೀಸೆಲ್ ಘಟಕಕ್ಕೆ ಅಕ್ರಮವಾಗಿಕಟ್ಟಿಗೆ ಸಾಗಾಟ

ನಂದಿಕೂರುಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವಬಯೋ ಡೀಸೆಲ್ ಘಟಕವೊಂದಕ್ಕೆಅಕ್ರಮವಾಗಿ ಅವ್ಯಾವಹತವಾಗಿಮರಗಳನ್ನು ಕಡಿದು ಕಟ್ಟಿಗೆ ಸಾಗಾಟಮಾಡಲಾಗುತ್ತಿದೆ ಎಂದು ಗ್ರಾಮಸ್ಥನಾಗೇಶ್ ಭಟ್ ಅರಣ್ಯ ಇಲಾಖೆಅಧಿಕಾರಿಯನ್ನು ತರಾಟೆಗೆತೆಗೆದುಕೊಂಡರು.ಈವೇಳೆ ಸಮಜಾಯಿಷಿ ನೀಡಿದ ಅಧಿಕಾರಿಮಲ್ಲಿಕಾರ್ಜುನ,ಸರ್ಕಾರವೇಪಟ್ಟಾ ಜಮೀನಿನಲ್ಲಿರುವ ನಿರ್ದಿಷ್ಟ45 ಜಾತಿಯಮರಗಳನ್ನು ಪರವಾನಗಿ ರಹಿತವಾಗಿಕಟಾವು ಹಾಗೂ ಸಾಗಾಣೆ ಮಾಡಲು ಅವಕಾಶನೀಡಿದೆ ಎಂದರು.ಆಜಾತಿಯ ಮರಗಳ ಪಟ್ಟಿಯನ್ನು ನೀಡುವಂತೆಗ್ರಾಮಸ್ಥರು ಆಗ್ರಹಿಸಿದರು.ಮರಗಳಪಟ್ಟಿ ನೀಡುವುದಾಗಿ ಅಧಿಕಾರಿಭರವಸೆ ನೀಡಿದರು.ಸರ್ಕಾರದಆದೇಶ ಮೀರಿ ಅಕ್ರಮವಾಗಿ ಮರಗಳನ್ನುಸಾಗಾಟ ಮಾಡಿದ್ದರೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net