ಉಡುಪಿ ಉತ್ಸವದಲ್ಲಿ ಮತ್ಸ್ಯ ಕನ್ಯೆಯರ ಲೈವ್ ಪ್ರದರ್ಶನ, 180 ಅಡಿ ಅಗಲ, 30 ಅಡಿ ಎತ್ತರದ ನಯಾಗರ ಫಾಲ್ಸ್ನ ಮಾದರಿ ವಿಶೇಷ ಆಕರ್ಷಣೆಯಾಗಿದೆ. ಚಿತ್ತಾಕಾರದ ಲೈಟಿಂಗ್ಸ್ನಲ್ಲಿ ಈ ಜಲಪಾತ ಕಂಗೊಳಿಸುತ್ತಲಿದೆ. ಯುರೋಪಿಯನ್ ಸಿಟಿ ಮಾದರಿ, ವಸ್ತು ಪ್ರದರ್ಶನ ಹಾಗೂ ವಿವಿಧ ಬಗೆಯ ತಿಂಡಿ-ತಿನಿಸುಗಳೂ ಲಭ್ಯವಿದೆ. ಉಡುಪಿಯಲ್ಲಿ ಪ್ರಥಮ ಬಾರಿಗೆ ಅಮ್ಯೂಸ್ಮೆಂಟ್ ಅಳವಡಿಸಲಾಗಿದ್ದು, ಇಲ್ಲಿನ ಸುನಾಮಿ ರೈಡ್, ಸ್ಕ್ರೀನ್ ಟವರ್ಗಳು ಗಮನ ಸೆಳೆಯುತ್ತಿದೆ. ಉಡುಪಿ ಉತ್ಸವದ ಪ್ರಥಮ ದಿನವೇ ಜನಜಂಗುಳಿ ಕಂಡುಬಂತು. ಜ.30ರ ವರೆಗೂ ಉತ್ಸವ ಮುಂದುವರಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.