ಉತ್ಕೃಷ್ಟತೆಯ ಪ್ರಯತ್ನ ಬದುಕುಳಿಯುವ ತಂತ್ರ

ಉಡುಪಿಯ ಡಾ. ಜಿ.ಶಂಕರ್​ ಕಾಲೇಜ್​ನಲ್ಲಿ ಆಯೋಜಿಸಿದ್ದ ಓರಿಯಂಟೇಷನ್​ ಕಾರ್ಯಕ್ರಮವನ್ನು ಪ್ರೊ. ಎನ್​.ಎಸ್​. ಶೆಟ್ಟಿ ಉದ್ಘಾಟಿಸಿದರು. ಪ್ರೊ. ಡಾ.ನಿಕೇತನಾ, ಪ್ರೊ. ಶ್ರೀಮತಿ ಅಡಿಗ, ಡಾ. ರಾಜೇಂದ್ರ ಕೆ., ಡಾ. ಅಬ್ದುಲ್​ ರಝಾಕ್​ ಇದ್ದರು.
ಉಡುಪಿಯ ಡಾ. ಜಿ.ಶಂಕರ್​ ಕಾಲೇಜ್​ನಲ್ಲಿ ಆಯೋಜಿಸಿದ್ದ ಓರಿಯಂಟೇಷನ್​ ಕಾರ್ಯಕ್ರಮವನ್ನು ಪ್ರೊ. ಎನ್​.ಎಸ್​. ಶೆಟ್ಟಿ ಉದ್ಘಾಟಿಸಿದರು. ಪ್ರೊ. ಡಾ.ನಿಕೇತನಾ, ಪ್ರೊ. ಶ್ರೀಮತಿ ಅಡಿಗ, ಡಾ. ರಾಜೇಂದ್ರ ಕೆ., ಡಾ. ಅಬ್ದುಲ್​ ರಝಾಕ್​ ಇದ್ದರು.
Published on

* ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಎನ್​.ಎಸ್​. ಶೆಟ್ಟಿ ಅಭಿಪ್ರಾಯ 

* ಡಾ. ಜಿ.ಶಂಕರ್​ ಕಾಲೇಜ್​ನಲ್ಲಿ 'ಓರಿಯಂಟೇಷನ್​' ಕಾರ್ಯಕ್ರಮ

ಉಡುಪಿ: ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಬದಲಾವಣೆ ಸ್ವೀಕರಿಸಿ, ನಿರಂತರವಾಗಿ ತಮ್ಮಲ್ಲಿರುವ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನದೊಂದಿಗೆ ಸಿದ್ಧರಾಗಬೇಕು. ಉತ್ಕೃಷ್ಟತೆಗಾಗಿ ಪ್ರಯತ್ನಿಸುವುದು ಈಗ ಬದುಕುಳಿಯುವ ತಂತ್ರವಾಗಿದೆ ಎಂದು ಅರ್ಥಶಾಸ್ತ್ರಜ್ಞ, ಶೈಕ್ಷಣಿಕ ಸಂಶೋಧಕ ಹಾಗೂ ಜಸ್ಟೀಸ್​ ಕೆ.ಎಸ್​. ಹೆಗ್ಡೆ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ನ ಪ್ರೊಫೆಸರ್​ ಎಮೆರಿಟಸ್​ ಪ್ರೊ. ಎನ್​.ಎಸ್​. ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ 'ಓರಿಯಂಟೇಷನ್​' ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜ್​ನ ಪ್ರಾಂಶುಪಾಲೆ ಪ್ರೊ.ನಿಕೇತನಾ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದನ್ನೇ ಸಂಪೂರ್ಣವಾಗಿ ಅವಲಂಬಿಸಬಾರದು. ವಿದ್ಯಾರ್ಥಿಗಳು ವಿವೇಕದಿಂದ ತಂತ್ರಜ್ಞಾನ ಬಳಸಬೇಕು ಎಂದರು.
ಕಾಲೇಜ್​ನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಕೆ., ಸಹಾಯಕ ಪ್ರಾಧ್ಯಾಪಕ ಡಾ. ಅಬ್ದುಲ್​ ರಝಾಕ್​, ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ಪುನೀತ್​ ತೆಂಡೂಲ್ಕರ್​, ಆಶಾ ಉಪಸ್ಥಿತರಿದ್ದರು.
ವಿಜಿತಾ ಸ್ವಾಗತಿಸಿದರು. ಪೂಜಾ ಪರಿಚಯಿಸಿದರು. ರುತು ಕಾರ್ಯಕ್ರಮ ನಿರೂಪಿಸಿದರು.
"

ಬೇಟೆ ಮತ್ತು ಆಹಾರ ಸಂಗ್ರಹಣೆಯಿಂದ ಕೃಷಿಯತ್ತ ಸಾಗಲು ಮಾನವಕುಲಕ್ಕೆ ಕೋಟ್ಯಂತರ ವರ್ಷ ಬೇಕಾದವು. ಕೈಗಾರಿಕೀಕರಣಕ್ಕೆ ಸುಮಾರು 1 ಸಾವಿರ ವರ್ಷ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗಕ್ಕೆ ಸುಮಾರು 100 ವರ್ಷ ಹಾಗೂ ವಿವಿಧ ಚಟುವಟಿಕೆಗಳ ಡಿಜಿಟಲೀಕರಣಕ್ಕೆ ಸುಮಾರು 50 ವರ್ಷ ಬೇಕಾದವು. ಜಗತ್ತು ಇಂದು ಹಿಂದೆಂದೂ ಕಾಣದ ವೇಗದಲ್ಲಿ ಬದಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net