ಸೀತಾಂಗೋಳಿ ನಿವಾಸಿ ಫ್ರಾನ್ಸಿಸ್ ಪಾಸ್ಕಲ್ ಡಿ ಸೋಜ ಸಲ್ಲಿಸಿದ ದೂರು ಪರಿಗಣಿಸಿ ಈ ತೀರ್ಪು ನೀಡಲಾಗಿದೆ. ಪಾಸ್ಕಲ್ ಡಿಸೋಜ ಕಳತ್ತೂರಿನಿಂದ ಕಟ್ಟತ್ತಡ್ಕ ದಾರಿಯಾಗಿ ಸೀತಾಂಗೋಳಿಗೆ ತನ್ನ ಬೈಕ್‌ನಲ್ಲಿ ಸಂಚರಿಸುವಾಗ ಪಳ್ಳಂ ಎಂಬಲ್ಲಿ ಆಡುಗಳ ಹಿಂಡೊಂದು ರಸ್ತೆಯಲ್ಲಿ ಅಸ್ತವ್ಯಸ್ತವಾಗಿ ಚಲಿಸಿದ ಪರಿಣಾಮ ಅಪಘಾತ ಸಂಭವಿಸಿತ್ತು. ಕಾಲಿನ ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಪಾಸ್ಕಲ್ ಅವರ ಚಿಕಿತ್ಸೆಗೆ ಹೆಚ್ಚಿನ ಮೊತ್ತ ವ್ಯಯವಾಗಿತ್ತು.