ರೈಲು ಮಂಗಳೂರಿನ ಪಡಿಲ್ ಮಾರ್ಗವಾಗಿ ಸಂಚರಿಸಿದರೆ ಪರೆಂಗಿಪೇಟೆ, ಜೋಕಟ್ಟೆ, ಸುರತ್ಕಲ್, ಉಡುಪಿ ಮತ್ತು ಕುಂದಾಪುರ ಭಾಗದ ಜನರಿಗೆ ಅತೀ ಕಡಿಮೆ ಅವಧಿಯಲ್ಲಿ ತಲುಪಲು ಸಾಧ್ಯವಾಗುತ್ತದೆ. ಒಂದು ವೇಳೆ ರೈಲು ಮಂಗಳೂರು ನಗರ ಪ್ರವೇಶಿಸಿದರೆ, ಸಮಯ ಹೊಂದಾಣಿಕೆಗಾಗಿ ಸುರತ್ಕಲ್, ಉಡುಪಿ, ಕುಮಟಾ ಮತ್ತು ಕಾರವಾರ ನಿಲ್ದಾಣಗಳ ನಿಲುಗಡೆಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಮಂಗಳೂರು ರೈಲ್ವೆ ನಿಲ್ದಾಣವನ್ನು ಕೇರಳದ ದಕ್ಷಿಣ ರೈಲ್ವೆ (Southern Railway) ವಲಯದಿಂದ ಮುಕ್ತಗೊಳಿಸಿ, ಹುಬ್ಬಳ್ಳಿಯ ನೈಋತ್ಯ ರೈಲ್ವೆ (South Western Railway) ವಲಯಕ್ಕೆ ಸೇರಿಸಬೇಕೆಂದು ಅಗ್ರಹಿಸಿದರು. ಈ ಬೇಡಿಕೆಯನ್ನು ರೈಲ್ವೆ ಸಚಿವ ವಿ. ಸೋಮಣ್ಣ ಗಮನಕ್ಕೂ ತರಲಾಗಿದೆ ಎಂದರು.