

ಕಾರ್ಖಾನೆ ನಿಮಾಣವಾಗುವ ಪ್ರದೇಶದಲ್ಲಿ ವಸತಿ ಸಮುಚ್ಚಯ, ಹಲವಾರು ಮನೆ, ವಾಣಿಜ್ಯ ಕಟ್ಟಡ, ಶಿಕ್ಷಣ ಸಂಸ್ಥೆ, ಧಾರ್ಮಿಕ ಕೇಂದ್ರ, ವಲಸೆ ಕಾರ್ಮಿಕರ ನೂರಾರು ಜೋಪಡಿಗಳೂ ಇವೆ. ನಗರ ಪ್ರದೇಶಕ್ಕೆ ಮಾರಕವಾಗಿರುವ ಈ ಯೋಜನೆ ರದ್ದುಗೊಳಿಸಬೇಕು. ಸೂಕ್ತ ಜಾಗಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಪರಿಸರವಾದಿಗಳು, ಸಂಘ-ಸಂಸ್ಥೆಗಳು ಹಾಗೂ ನಾಗರಿಕ ಸಮಾಜದ ಬೆಂಬಲ ಪಡೆದು ಪ್ರತಿಭಟಿಸಲಾಗುವುದು.