ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ

 ಶೇಡಿಮನೆ ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ವೇದಾವತಿ, ಶ್ರೀಕಾಂತ ಆಚಾರಿ, ಸುಧಾಕರ ಶೆಟ್ಟಿ ಅರಸಮ್ಮಕಾನು, ಮಹೇಶಕುಮಾರ್ ಮಂದಾರ್ತಿ, ಗುಲಾಬಿ, ಡಾ.ರಾಜೇಶ್ವರಿ ಎ.ಜಿ., ಉಷಾಲತಾ, ಮಹೇಶ್ ಹೆಗ್ಡೆ, ಅತುಲ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಕೋಟ ಶ್ರೀನಿವಾಸ ಪೂಜಾರಿ, ಲಕ್ಷ್ಮಣ, ರತ್ನಾಕರ ಶೆಟ್ಟಿ ಕುದ್ರುಬೀಡು, ಮೋಹನದಾಸ್ ಹೆಗ್ಡೆ, ರಿತೇಶ್ ಪುತ್ರನ್, ಡಾ.ರಾಜೇಶ್ವರಿ ಎ.ಜಿ., ಉದಯಕುಮಾರ್ ಶೆಟ್ಟಿ ಬಾಗಳ್‌ಮಕ್ಕಿ ಉಪಸ್ಥಿತರಿದ್ದರು.
ಶೇಡಿಮನೆ ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ವೇದಾವತಿ, ಶ್ರೀಕಾಂತ ಆಚಾರಿ, ಸುಧಾಕರ ಶೆಟ್ಟಿ ಅರಸಮ್ಮಕಾನು, ಮಹೇಶಕುಮಾರ್ ಮಂದಾರ್ತಿ, ಗುಲಾಬಿ, ಡಾ.ರಾಜೇಶ್ವರಿ ಎ.ಜಿ., ಉಷಾಲತಾ, ಮಹೇಶ್ ಹೆಗ್ಡೆ, ಅತುಲ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಕೋಟ ಶ್ರೀನಿವಾಸ ಪೂಜಾರಿ, ಲಕ್ಷ್ಮಣ, ರತ್ನಾಕರ ಶೆಟ್ಟಿ ಕುದ್ರುಬೀಡು, ಮೋಹನದಾಸ್ ಹೆಗ್ಡೆ, ರಿತೇಶ್ ಪುತ್ರನ್, ಡಾ.ರಾಜೇಶ್ವರಿ ಎ.ಜಿ., ಉದಯಕುಮಾರ್ ಶೆಟ್ಟಿ ಬಾಗಳ್‌ಮಕ್ಕಿ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಆರ್ಡಿ
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣಕ್ಕೆ ಅವಕಾಶಗಳಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಉನ್ನತ ಹುದ್ದೆ, ಶ್ರೇಷ್ಠ ಸ್ಥಾನಮಾನದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಪಾಲಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶೇಡಿಮನೆ ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್.ಭುಜಂಗ ಶೆಟ್ಟಿ ಕುದ್ರುಬೀಡು ಕೊಳ್ಕೆಬೈಲು ಸ್ಮಾರಕ ರಂಗ ಮಂದಿರದಲ್ಲಿ ಜ್ಞಾನ ಸಪ್ತತಿ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಅಶ್ವಿನಿ ಹೋಮಿಯೋ ಹಾಗೂ ಆಯುರ್ವೇದಿಕ್ ಪ್ರಾಡಕ್ಟ್ ಪ್ರೈ.ಲಿ. ಹೈದ್ರಾಬಾದ್ ಇದರ ಶೇಡಿಮನೆ ಘಟಕದ ವ್ಯವಸ್ಥಾಪಕ ಲಕ್ಷ್ಮಣ,ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ರತ್ನಾಕರ ಶೆಟ್ಟಿ ಕುದ್ರುಬೀಡು, ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನದಾಸ್ ಹೆಗ್ಡೆ, ಮಡಾಮಕ್ಕಿ ಪಿಡಿಒ ರಿತೇಶ್ ಪುತ್ರನ್, ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜಿ., ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ ಯು., ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಬಾಗಳ್‌ಮಕ್ಕಿ, ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಸತ್ಯನ್, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಪೂಜಾರಿ, ಆರ್ಥಿಕ ಸಮಿತಿ ಅಧ್ಯಕ್ಷ ವಾಸುದೇವ ನಕ್ಷತ್ರಿ, ಮುಖ್ಯ ಶಿಕ್ಷಕಿ ಮೀನಾಕ್ಷಿ, ವಿದ್ಯಾರ್ಥಿ ನಾಯಕ ಸನತ್ ಎಸ್.ಕುಲಾಲ್ ಉಪಸ್ಥಿತರಿದ್ದರು.
ಶಿಕ್ಷಕ ಶ್ರೀಕಾಂತ ಆಚಾರಿ, ಮುಖ್ಯ ಶಿಕ್ಷಕಿ ಮೀನಾಕ್ಷಿ ವರದಿ ವಾಚಿಸಿದರು. ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯರು ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಜಯಶ್ರೀ ವಂದಿಸಿದರು.

ದತ್ತಿನಿಧಿ ವಿತರಣೆ, ಸನ್ಮಾನ

ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣೆ, ನಿವೃತ್ತ ಶಿಕ್ಷಕಿ ವೇದಾವತಿ, ಶಿಕ್ಷಕ ಶ್ರೀಕಾಂತ ಆಚಾರಿ, ಹೆಬ್ರಿ ತಾಲೂಕು 6ನೇ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಅರಸಮ್ಮಕಾನು, ಯಕ್ಷಗಾನ ತರಭೇತುದಾರ ಮಹೇಶಕುಮಾರ್ ಮಂದಾರ್ತಿ, ವಾರ್ಷಿಕೋತ್ಸವ ಉಟೋಪಚಾರದ ದಾನಿ ಗುಲಾಬಿ, ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜಿ., ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಉಷಾಲತಾ, ಪೊಲೀಸ್ ಅಧಿಕಾರಿ ಮಹೇಶ್ ಹೆಗ್ಡೆ, ರಾಜ್ಯಮಟ್ಟದ ವಿಶೇಷ ಚೇತನ ಕ್ರೀಡಾಪಟು ಅತುಲ್ಯ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಯಕ್ಷೋತ್ತಮ ಕಾಳಗ, ಮೀನಾಕ್ಷಿ ಕಲ್ಯಾಣ ಯಕ್ಷಗಾನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net