ಅಪಹರಣ ತಂಡದ ಓರ್ವ ಆರೋಪಿ ಸೆರೆ

crime
crime
Published on
ಕಾಸರಗೋಡು: ಖಾಸಗಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ 1 ಕೋಟಿ ರೂ. ಮೊತ್ತ ವಾಪಸ್ ನೀಡದ ಬಗ್ಗೆ ಪೊಲೀಸರಿಗೆ ದೂರು ನೀಡಿದ ದ್ವೇಷದಲ್ಲಿ ಯುವಕ ಮತ್ತು ಆತನ ಸಂಬಂಧಿಯನ್ನು ಅಪಹರಿಸಿ ಹಲ್ಲೆ ನಡೆಸಿದ ಸುಪಾರಿ ತಂಡದಲ್ಲಿದ್ದ ಕಾಸರಗೋಡು ನಿವಾಸಿ ಅಬೂಬಕರ್ ಸಿದ್ಧೀಕ್(36) ಎಂಬಾತನನ್ನು ಕಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಸುಪಾರಿ ಪಡೆದ ತಂಡ ಕಣ್ಣೂರು ಪಳ್ಳಿಪ್ರ ಆದಿರಾನ್ ನಿವಾಸಿ ಪಿ.ರಿಯಾಸ್ ಮತ್ತು ಅವರ ಸಂಬಂಧಿಯನ್ನು ಏ.19ರಂದು ಕಾರಿನಲ್ಲಿ ಅಪಹರಿಸಿ ಮಂಗಳೂರಿನ ಅತ್ತಾವರದಲ್ಲಿ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿ ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರಾರಿಯಾಗಿತ್ತು. ಈ ತಂಡದಲ್ಲಿ ಬಂಧಿತ ಸಿದ್ದಿಕ್ ಕೂಡ ಇದ್ದನು. ರಿಯಾಸ್ ಖಾಸಗಿ ಸಂಸ್ಥೆಯಲ್ಲಿ 1 ಕೋಟಿ ರೂ. ಹೂಡಿಕೆ ಮಾಡಿದ್ದರು. ಬಳಿಕ ಆ ಹಣ ಹಿಂತಿರುಗಿಸುವಂತೆ ಕೇಳಿದಾಗ ವಾಪಸ್ ನೀಡಿರಲಿಲ್ಲ. ಈ ಬಗ್ಗೆ ರಿಯಾಸ್ ಕಣ್ಣೂರು ಟೌನ್ ೊಲೀಸರಿಗೆ ದೂರು ನೀಡಿದ್ದರು.
ದೂರನ್ನು ಹಿಂತೆಗೆದುಕೊಳ್ಳಬೇಕೆಂದು ಬೆದರಿಕೆಯೊಡ್ಡಿ 20 ಮಂದಿಯನ್ನೊಳಗೊಂಡ ಸುಪಾರಿ ತಂಡ ತನ್ನನ್ನು ಮತ್ತು ಸಂಬಂಧಿಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿರುವುದಾಗಿ ರಿಯಾಸ್ ಪೊಲೀಸರಿಗೆ ದೂರು ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net