ವಾರ್ಷಿಕವಾಗಿ ಬರುವ ಆಷಾಢ ಮಾಸದಲ್ಲಿ ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಜಾರುತ್ತಾನೆ. ಹೀಗಾಗಿ ಈ ದಿನವನ್ನು ಆಷಾಢ ಶಯನಿ ಎಂದು ಕರೆಯಲಾಗುತ್ತದೆ. ಏಕಾದಶಿಯಿಂದ ಆರಂಭಿಸಿ ಮುಂದಿನ 4 ತಿಂಗಳು ವಿಷ್ಣುವು ನಿದ್ರಾವಸ್ಥೆಯಲ್ಲಿ ಇರುತ್ತಾನೆ. ಹೀಗಾಗಿ ಆತನ ಸ್ಮರಣೆ, ಆರಾಧನೆಗಾಗಿ ಮುದ್ರಾಧಾರಣೆ ಮಾಡಿಕೊಳ್ಳುವ, ಚಾತುರ್ಮಾಸ್ಯ ವ್ರತ ಆರಂಭಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.