ಸಿರಿ ಜಾತ್ರೆಗೆ ರಾಜಾಜ್ಞೆ ಓಲೆ!

ನಂದಳಿಕೆ ಸಿರಿಜಾತ್ರೆಯ ವಿಭಿನ್ನ ಶೈಲಿಯ ಪ್ರಚಾರ ಫಲಕಗಳು.
ನಂದಳಿಕೆ ಸಿರಿಜಾತ್ರೆಯ ವಿಭಿನ್ನ ಶೈಲಿಯ ಪ್ರಚಾರ ಫಲಕಗಳು.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಸಿರಿ ಜಾತ್ರೆ ಪ್ರತಿ ಬಾರಿಯೂ ತನ್ನ ಪ್ರಚಾರ ವೈಖರಿಯಿಂದಲೇ ನಾಡಿನಾದ್ಯಂತ ಸುದ್ದಿಯಾಗಿದೆ. ಸದಾ ಹೊಸತನಕ್ಕೆ ಸಾಕ್ಷಿಯಾಗುವ ನಂದಳಿಕೆ ಸಿರಿಜಾತ್ರೆ ಅಯನೋತ್ಸವ ಈ ವರ್ಷ ಭಕ್ತರನ್ನು ಆಮಂತ್ರಿಸಲು ‘ರಾಜಾಜ್ಞೆಯ ಓಲೆ’ ವಾದರಿಯಲ್ಲಿ ಫಲಕ ತಯಾರಿಸಿದ್ದು, ಇದು ಅಂದಿನ ಅರಸರ ಕಾಲದ ವೈಭವವನ್ನು ಮರು ಸೃಷ್ಟಿಸಿದಂತಿದೆ.
ಆದಿ ಆಲಡೆ, ಸಿರಿಕ್ಷೇತ್ರ, ಸಕಲ ಸಿರಿಕ್ಷೇತ್ರಗಳ ತವರೂರು ಎಂದೇ ಪ್ರಸಿದ್ಧಿ ಪಡೆದ ಐತಿಹಾಸಿಕ ನಾಲ್ಕುಸ್ಥಾನ ನಂದಳಿಕೆಯಲ್ಲಿ ಪ್ರತಿ ವರ್ಷ ಮೀನ ಪೌರ್ಣಮಿಯಂದು ನಡೆಯುವ ಸಿರಿ ಜಾತ್ರೆ ಇಡೀ ನಾಡಿನಲ್ಲೆ ಪ್ರಸಿದ್ಧಿ ಪಡೆದಿದೆ. ಹಿಂದಿನ ಪರಂಪರೆಯನ್ನು ಉಳಿಸಿಕೊಂಡು ನಡೆಯುತ್ತಿರುವ ಜಾತ್ರೆಗಳಲ್ಲಿ ಒಂದಾದ ಸಿರಿ ಜಾತ್ರೆ ಏಪ್ರಿಲ್ 2ರಂದು ನಡೆಯಲಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅಚ್ಚುಕಟ್ಟಿನ ವ್ಯವಸ್ಥೆ ಹಾಗೂ ಶಿಸ್ತಿನ ಸ್ವಯಂಸೇವಕರ ತಂಡವನ್ನು ಹೊಂದಿರುವ ಅಯನೋತ್ಸವಕ್ಕೆ ಈ ಬಾರಿ ಭಕ್ತರನ್ನು ಸೆಳೆಯಲು ವಿಶೇಷ ವಾದರಿಯ ಫಲಕ ತಯಾರಿಸಲಾಗಿದೆ.
ಈ ಹಿಂದೆ ಮೈಲಿಗಲ್ಲು, ಅಂಚೆಚೀಟಿ, ಛತ್ರಿ, ವಾವಿನ ಎಳೆಯ ತೋರಣ, ಗೋಣಿ ಚೀಲ, ಹಕ್ಕಿಗಳಿಗೆ ನೀಡುವ ವಿಶೇಷ ಕಾಳಜಿಯುಳ್ಳ ಫಲಕ ಹೀಗೆ ಅನೇಕ ಬಗೆಯ ಪ್ರಚಾರದ ಮೂಲಕ ಗಮನ ಸೆಳೆದ ನಂದಳಿಕೆ ಸಿರಿಜಾತ್ರೆ ಅಯನೋತ್ಸವ ಈ ಬಾರಿ ಹಿಂದಿನ ರಾಜರ ಕಾಲದ ಓಲೆಯ ವಾದರಿಯಲ್ಲಿ ಬಟ್ಟೆಯಲ್ಲಿ ರಚಿಸಿ ಅದರಲ್ಲಿ ನಂದಳಿಕೆ ಸಿರಿಜಾತ್ರೆ ಅಯನೋತ್ಸವ ಹಾಗೂ ದಿನಾಂಕ ಬರೆಯಲಾಗಿದೆ. ಈ ಪರಿಕಲ್ಪನೆಯ ರೂವಾರಿ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ. ಪ್ರತಿ ಬಾರಿಯೂ ವಿಭಿನ್ನ ವಿಶೇಷ ಆಲೋಚನೆ ಮೂಲಕ ಸಿರಿಜಾತ್ರೆಗೆ ಭಕ್ತರನ್ನು ಸೆಳೆಯುವ ಪ್ರಯತ್ನದಲ್ಲಿರುವ ಅವರು, ಈ ಬಾರಿಯೂ ವಿಶೇಷ ಪರಿಕಲ್ಪನೆ ಮೂಲಕ ಗತಕಾಲದ ಪರಂಪರೆಯನ್ನು ನೆನಪಿಸುವ ಪ್ರಚಾರ ಫಲಕದ ಪರಿಕಲ್ಪನೆ ವಾಡಿದ್ದಾರೆ.

ಗಮನ ಸೆಳೆಯುತ್ತಿರುವ ಫಲಕಗಳು

ಸಾವಾನ್ಯವಾಗಿ ಜಾತ್ರೆ ಎಂದರೆ ಪ್ಲಾಸ್ಟಿಕ್ ಬ್ಯಾನರ್ ಅಥವಾ ಫ್ಲೆಕ್ಸ್ ಅಬ್ಬರವಿರುತ್ತದೆ. ಆದರೆ ಇದಕ್ಕೆ ಭಿನ್ನವಾಗಿ, ನಂದಳಿಕೆ ಕ್ಷೇತ್ರ ರಾಜರ ಕಾಲದಲ್ಲಿ ಸಂದೇಶ ರವಾನಿಸಲು ಬಳಸುತ್ತಿದ್ದ ಓಲೆ ವಾದರಿ ಪ್ರಚಾರ ಫಲಕಗಳನ್ನು ಸಿದ್ಧಪಡಿಸಿದೆ. ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ರಸ್ತೆ ಇಕ್ಕೆಲಗಳಲ್ಲಿಯೂ ಈ ಪ್ರಚಾರ ಫಲಕ ಕಾಣಸಿಗಲಿದೆ.

ಪರಿಸರ ಸ್ನೇಹಿ ಪರಿಕಲ್ಪನೆ

ಪ್ರತಿ ಬಾರಿಯೂ ಪರಿಸರ ಕಾಳಜಿ ಹೊಂದಿಕೊಂಡು ಪ್ರಚಾರ ಫಲಕವನ್ನು ತಯಾರಿಸುವ ರೀತಿಯಲ್ಲೇ ಈ ಬಾರಿಯೂ ಬಟ್ಟೆ ಬಳಸಿ ಪರಿಸರ ಸ್ನೇಹಿ ಕಾಳಜಿ ವಹಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ 2,000ಕ್ಕೂ ಹೆಚ್ಚು ಇಂತಹ ವಿಶಿಷ್ಟ ಫಲಕಗಳನ್ನು ಅಳವಡಿಸಲಾಗುತ್ತದೆ. ಕಲಾತ್ಮಕ ವಿನ್ಯಾಸದಿಂದ ಕೂಡಿದ ಫಲಕಗಳು ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುತ್ತಿವೆ.


ಮೆಚ್ಚುಗೆಯ ಮಹಾಪೂರ

ಸಾವಾಜಿಕ ಜಾಲತಾಣಗಳಲ್ಲಿ ಈ ಓಲೆ ವಾದರಿಯ ಪ್ರಚಾರದ ಫೋಟೋಗಳು ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಧುನಿಕ ಕಾಲದಲ್ಲೂ ನಮ್ಮ ಹಳೆಯ ಸಂಪ್ರದಾಯ ಮತ್ತು ರಾಜವಂಶದ ವೈಭವವನ್ನು ನೆನಪಿಸುವ ಈ ಪ್ರಯತ್ನವು ಯುವ ಪೀಳಿಗೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನಮ್ಮ ಸಂಪ್ರದಾಯವನ್ನು ಉಳಿಸುವ ಜತೆಗೆ ಪರಿಸರಕ್ಕೆ ಪೂರಕವಾಗಿ ಜಾತ್ರೆ ಪ್ರಚಾರ ನಡೆಯಬೇಕು ಎಂಬ ಉದ್ದೇಶದಿಂದ ಈ ಹೊಸ ಪ್ರಯತ್ನ ವಾಡಲಾಗಿದೆ. ಇದು ಕೇವಲ ಪ್ರಚಾರವಲ್ಲ, ನಮ್ಮ ಸಂಸ್ಕೃತಿಯ ಪ್ರತಿಬಿಂಬ. ನಂದಳಿಕೆಯ ಈ ನವೀನ ಪ್ರಯೋಗ ಇತರ ಧಾರ್ಮಿಕ ಕೇಂದ್ರಗಳಿಗೂ ವಾದರಿಯಾಗಿದೆ.

-----ಫೋಟೋ-----
*ಬೆಳ್ಮಣ್-23-ವಾರ್ಚ್-01
ನಂದಳಿಕೆ ಸಿರಿಜಾತ್ರೆಯ ವಿಭಿನ್ನ ಶೈಲಿಯ ಪ್ರಚಾರ ಫಲಕಗಳು.
*ಬೆಳ್ಮಣ್-23-ವಾರ್ಚ್-02-ಸುಹಾಸ್ ಹೆಗ್ಡೆ
***********************
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net