ಸಮ್ಮಿಲನದಿಂದ ಗೆಳೆತನದ ಬಾಂಧವ್ಯ ವೃದ್ಧಿ

ಉಡುಪಿಯ ಖಾಸಗಿ ಹೋಟೆಲ್​ನಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆಯಿತು. ಪ್ರೊ. ಎಂ.ಎಲ್​. ಸಾಮಗ, ಪ್ರೊ. ಸುರೇಂದ್ರನಾಥ ಶೆಟ್ಟಿ, ಪ್ರೊ. ಅರವಿಂದ ಹೆಬ್ಬಾರ್​, ಗೋಪಾಲ್​ ರಾವ್​, ಯಶೋದಾ ರಾವ್​, ಕೋಮಲಾ, ಬಾಲಕೃಷ್ಣ ಶೆಟ್ಟಿ, ಯು.ಕಲ್ಯಾಣಿ ಪೈ ಇತರರಿದ್ದರು.
ಉಡುಪಿಯ ಖಾಸಗಿ ಹೋಟೆಲ್​ನಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆಯಿತು. ಪ್ರೊ. ಎಂ.ಎಲ್​. ಸಾಮಗ, ಪ್ರೊ. ಸುರೇಂದ್ರನಾಥ ಶೆಟ್ಟಿ, ಪ್ರೊ. ಅರವಿಂದ ಹೆಬ್ಬಾರ್​, ಗೋಪಾಲ್​ ರಾವ್​, ಯಶೋದಾ ರಾವ್​, ಕೋಮಲಾ, ಬಾಲಕೃಷ್ಣ ಶೆಟ್ಟಿ, ಯು.ಕಲ್ಯಾಣಿ ಪೈ ಇತರರಿದ್ದರು.
Published on

* ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್​. ಸಾಮಗ ಅನಿಸಿಕೆ

* ಉಡುಪಿಯಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ 

ಉಡುಪಿ: ಹಳೆಯ ಸ್ನೇಹಿತರೊಂದಿಗೆ ಒಗ್ಗೂಡುವಿಕೆಯಿಂದ ಬದುಕು ಹಗುರವಾಗುತ್ತದೆ. ದೇಹ-ಮನದೊಳಗೆ ಗಟ್ಟಿಯಾಗಿರುವ ಒತ್ತಡವೂ ಒಂದಿಷ್ಟು ದೂರವಾಗುತ್ತದೆ. ಪ್ರಮುಖವಾಗಿ ಸ್ನೇಹ ಅಥವಾ ಗೆಳೆತನದ ಬಾಂಧವ್ಯ ಇನ್ನಷ್ಟು ವೃದ್ಧಿಯಾಗುತ್ತದೆ. ಇಂತಹ ಸಮ್ಮಿಲನ ಮುಂದುವರಿಯಬೇಕು. ಕಲಿತ ಶಿಕ್ಷಣ ಸಂಸ್ಥೆಯೊಂದಿಗೆ ನಿಕಟ ಸಂಬಂಧ ಮುಂದುವರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್​. ಸಾಮಗ ತಿಳಿಸಿದರು.
ಉಡುಪಿಯ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಎಂಜಿಎಂ ಕಾಲೇಜಿನ 1973ರ ಬಿಎ ಬ್ಯಾಚ್​ನ ಹಳೆಯ ವಿದ್ಯಾರ್ಥಿಗಳ 5ನೇ ಪುನರ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ, ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಅರವಿಂದ ಹೆಬ್ಬಾರ್​ ಅವರು ಉಪನ್ಯಾಸ ವೃತ್ತಿಯ ರಸಾನುಭವ ಹಾಗೂ ಹಳೆಯ ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮಗಾದ ಅನುಭವ  ಹಂಚಿಕೊಂಡರು. 
ಸಂಸ್ಥಾಪಕ ಗೋಪಾಲ್​ ರಾವ್​, ಯಶೋದಾ ರಾವ್​, ಕೋಮಲಾ, ಬಾಲಕೃಷ್ಣ ಶೆಟ್ಟಿ ಇತರರು ಉಪಸ್ಥಿತರಿದ್ದರು. ಹಳೆಯ ವಿದ್ಯಾರ್ಥಿನಿ ಯು.ಕಲ್ಯಾಣಿ ಪೈ ಕಾರ್ಯಕ್ರಮ ನಿರೂಪಿಸಿದರು. ಹಳೆಯ ವಿದ್ಯಾರ್ಥಿಗಳಿಂದ ವಿನೋದಾವಳಿ, ಪ್ರತಿಭಾ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net