ಹೆಬ್ರಿಯ ಸುನೀತಾ ಎಂಬ ಗ್ರಾಹಕರು ಬೆಂಗಳೂರಿನ ಓಲಾ ಇಲೆಕ್ಟ್ರಿಕ್ ಟೆಕ್ನಾಲಜೀಸ್ ಕಂಪೆನಿ ಇವರಿಂದ ಸ್ಕೂಟರ್ ಖರೀದಿಸಲು ರೂ.1,41,648 ಪಾವತಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಸ್ಕೂಟರ್ನಲ್ಲಿ ಚಾರ್ಜಿಂಗ್ ತೊಂದರೆ ಕಾಣಿಸಿದ್ದು, ಈ ಸಮಸ್ಯೆಯನ್ನು ಸರಿಪಡಿಸದೆ ಕಂಪೆನಿಯವರು ಸೇವಾ ನ್ಯೂನತೆ ಮಾಡಿದ್ದು, ಗ್ರಾಹಕರು ಕಂಪೆನಿಯ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.