ಆಧ್ಯಾತ್ಮದ ನೆಲೆಯಲ್ಲಿ ಒಡಿಸ್ಸಿ ನೃತ್ಯಕ್ಕಿದೆ ವಿಶೇಷ ಸ್ಥಾನ

 ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಒಡಿಸ್ಸಿ ಶಾಸೀಯ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಒಡಿಸ್ಸಿ ಶಾಸೀಯ ನೃತ್ಯ ಪ್ರದರ್ಶನ ನಡೆಯಿತು.
Published on
ಕಾರ್ಕಳ: ಪುರಾತನ ನಾಗರಿಕತೆಯಿಂದಲೂ ನೃತ್ಯ ಪ್ರಕಾರವು ನಮ್ಮ ಸಂಸ್ಕೃತಿಯ ಭಾಗವಾಗಿದೆ. ನವರಸಗಳನ್ನು ಪ್ರತಿಬಿಂಬಿಸುವ ಆಂಗಿಕ ಅಭಿನಯದ ಒಡಿಸ್ಸಿ ನೃತ್ಯವು ಭಾರತದ ಶಾಸೀಯ ನೃತ್ಯ ಪ್ರಕಾರವೆಂದೇ ಖ್ಯಾತಿ ಪಡೆದಿದೆ. ಒಡಿಶಾದ ದೇವಾಲಯಗಳಲ್ಲಿ ಪ್ರಸ್ತುತವಾಗಿದ್ದ ಈ ನೃತ್ಯ ಪ್ರಕಾರ ಇವತ್ತು ಜಗತ್ತಿನ ಎಲ್ಲ ಕಡೆಗಳಿಗೂ ಹರಡಿದೆ. ಆಧ್ಯಾತ್ಮದ ನೆಲೆಯಲ್ಲಿ ಈ ನೃತ್ಯಕ್ಕೆ ವಿಶೇಷ ಸ್ಥಾನವಿದೆ ಎಂದು ಅಂತಾರಾಷ್ಟ್ರೀಯ ಒಡಿಸ್ಸಿ ನೃತ್ಯ ಕಲಾವಿದ ರಾಹುಲ್‌ಆಚಾರ್ಯ ಹೇಳಿದರು.
ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಲಲಿತ ಕಲಾ ಸಂಘ ಮತ್ತು ಮಾಹೆಯ ಸಾಂಸ್ಕೃತಿಕ ಸಮನ್ವಯ ಸಮಿತಿ ಸ್ಪಿಕ್ ಮೆಕೆ ವತಿಯಿಂದ ಭುವನೇಂದ್ರ ಕಾಲೇಜಿನ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಒಡಿಸ್ಸಿ ಶಾಸೀಯ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿದರು.
ಬಳಿಕ ರಾಹುಲ್ ಆಚಾರ್ಯ ಅವರಿಂದ ಒಡಿಸ್ಸಿ ಶಾಸೀಯ ನೃತ್ಯ ಪ್ರದರ್ಶನ ನಡೆಯಿತು. ಗಾಯನದಲ್ಲಿ ಸುಕಾಂತ ಕುಮಾರ್ ಕುಂಡು, ವಯೋಲಿನ್‌ನಲ್ಲಿ ಪ್ರದೀಪ್ ಕುಮಾರ್ ಮಹಾರಾಣಾ, ತಾಳದಲ್ಲಿ ಸುಮುಖ ತಮಂಕರ್, ಮೃದಂಗದಲ್ಲಿ ದಿಬಾಕರ್ ಪರೀದಾ ಸಹಕರಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಈಶ್ವರ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ.ಲಕ್ಷ್ಮೀನಾರಾಯಣ ಕೆ.ಎಸ್., ಲಲಿತ ಕಲಾ ಸಂಘದ ಸಹ ಸಂಯೋಜಕ ಶಿವಾನಂದ ನಾಯಕ್ ಉಪಸ್ಥಿತರಿದ್ದರು.
ಲಲಿತ ಕಲಾ ಸಂಘದ ಸಂಯೋಜಕ ಪ್ರೊ.ನಂದಕಿಶೋರ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಅಕ್ಷತಾ ಕೋಟ್ಯಾನ್ ಸ್ವಾಗತಿಸಿದರು. ಅನನ್ಯಾ ಮಾಧವ್ ವಂದಿಸಿದರು. ಪೂರ್ವಿ ಆಚಾರ್ಯ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net