ಮನೆಯಲ್ಲಿನ ಸದಸ್ಯರ ನಡುವೆಯೇ ಸಣ್ಣಪುಟ್ಟ ವ್ಯತ್ಯಾಸವಾಗುತ್ತದೆ. ಅದಕ್ಕೆ ನಮ್ಮ ಸಂಘವೂ ಹೊರತಾಗಿಲ್ಲ. ಬೇಸರ, ಆಕ್ರೋಶ, ಅಸಮಾಧಾನ ಕಾರಣದಿಂದ ಸಂಘದ ರಥ ಹಿಂದಕ್ಕೆ ಎಳೆಯಬೇಡಿ. ಇದು ನಿನ್ನೆ ಮೊನ್ನೆ ಹುಟ್ಟಿದ ಸಂಘವಲ್ಲ. 94 ವರ್ಷದ ಹಿಂದೆ ಡಿ.ವಿ. ಗುಂಡಪ್ಪ ಹುಟ್ಟಿಹಾಕಿದ ಬೃಹತ್ ಸಂಘಟನೆಯಾಗಿದ್ದು, ದೇಶದಲ್ಲಿಯೇ ಮಾದರಿಯಾಗಿದೆ. ಪತ್ರಿಕಾ ಭವನವು ಮಂದಿರಕ್ಕೆ ಸಮಾನವಾಗಿದೆ. ಇಲ್ಲಿ ಎಲ್ಲ ಧರ್ಮದ ಜನರೂ ಬರುತ್ತಾರೆ. ಸುಖ-ದು:ಖ, ತೊಡಕು, ಸಮಸ್ಯೆಗಳನ್ನು ಇಲ್ಲಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳುತ್ತಾರೆ. ಹೀಗಾಗಿ ಬರವಣಿಗೆಯಷ್ಟೇ ನಮ್ಮ ನಡೆ-ನುಡಿಯೂ ಮುಖ್ಯ. ವೃತ್ತಿ ಮನೋಧರ್ಮ, ಬದ್ಧತೆ ನಮ್ಮ ಗುರಿಯಾಗಿರಬೇಕು. ಇತ್ತೀಚೆಗೆ ಪತ್ರಕರ್ತ 'ಲೇಬಲ್'ನೊಂದಿಗೆ ಈ ವೃತ್ತಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು ಬ್ಲ್ಯಾಕ್ಮೇಲ್ ಮಾಡತೊಡಗಿದ್ದಾರೆ. ಕೆಲವರು ಯು-ಟ್ಯೂಬ್ ಚಾನಲ್ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದು, ಇಂತಹವರ ಬಗ್ಗೆ ಸಂಘ ಎಚ್ಚರಿಕೆ ವಹಿಸಬೇಕು. ಸದಸ್ಯತ್ಯ ನೀಡುವಾಗ ನೈಜತೆ ಪರಿಶೀಲಿಸಿ ನೀಡಬೇಕು. ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕದಿದ್ದಲ್ಲಿ ಈ ವೃತ್ತಿಗೂ ಅಪಖ್ಯಾತಿ ಬರುತ್ತದೆ ಎಂದು ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.