ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಯುಕ್ತ ಆಹಾರದ ಮಾಹಿತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಮುತ್ತುರಾಜ್, ಜಯಪ್ರಕಾಶ ಪಜಿಲ, ಸುಬ್ರಹ್ಮಣ್ಯ ಕೆರೆಮೂಲೆ ಇತರರಿದ್ದರು.
ಬದಿಯಡ್ಕ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಆರೋಗ್ಯಕರ ಆಹಾರ ಮತ್ತು ಗುಣಮಟ್ಟದ ಶಿಕ್ಷಣದ ಪಾತ್ರವಿದೆ. ಪೌಷ್ಟಿಕ ಆಹಾರ ಸೇವನೆ ದೈಹಿಕ ಹಾಗೂ ವಾನಸಿಕ ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿ. ವಿದ್ಯಾರ್ಥಿಗಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ನಾರಾಯಣ ಹೃದಯಾಲಯದ ಸಿಎಸ್‌ಆರ್ ಮುಖ್ಯಸ್ಥರಾದ ಮುತ್ತುರಾಜ್ ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಧರ್ಮಚಕ್ರ ಟ್ರಸ್ಟ್ ಮತ್ತು ಬೆಂಗಳೂರು ನಾರಾಯಣ ಹೃದಯಾಲಯದ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಯುಕ್ತ ಆಹಾರದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಪ್ರಮುಖರಾದ ಜಯಪ್ರಕಾಶ ಪಜಿಲ, ಸುಬ್ರಹ್ಮಣ್ಯ ಕೆರೆಮೂಲೆ, ಈಶ್ವರ ಭಟ್ ಹಳೆಮನೆ, ವಿಷ್ಣುಪ್ರಸಾದ ಕೋಳಾರಿ, ಕೃಷ್ಣ ಪ್ರತೀಕ್ ಬೆಳ್ಳಿಗೆ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಸ್ತುತಿ ಕುಳೂರು ವಂದಿಸಿದರು.