

ವಿಜಯವಾಣಿಸುದ್ದಿಜಾಲ ಕಾರ್ಕಳ
ಸರ್ಕಾರಿನಸಿರ್ಂಗ್ ಕಾಲೇಜಿಗೆ ಸ್ವಂತಕಟ್ಟಡ ಸಹಿತ ಮೂಲಸೌಕರ್ಯ ಒದಗಿಸುವಂತೆಒತ್ತಾಯಿಸಿ ಕಾರ್ಕಳದ ಸರ್ಕಾರಿಬಿ.ಎಸ್ಸಿನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳುಮತ್ತು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾರ್ಕಳದಸರ್ಕಾರಿ ನರ್ಸಿಂಗ್ ಕಾಲೇಜುಜಿಲ್ಲೆಯ ಏಕೈಕ ಸರ್ಕಾರಿ ನರ್ಸಿಂಗ್ಕಾಲೇಜಾಗಿದ್ದು,ಸ್ಥಾಪನೆಯಾಗಿವರ್ಷ ನಾಲ್ಕುವಾದರೂ ಕಟ್ಟಡನಿರ್ಮಾಣಗೊಂಡಿಲ್ಲ.ಪ್ರಸ್ತುತತಾಲೂಕು ಸರ್ಕಾರಿ ಆಸ್ಪತ್ರೆಯಹಳೇ ಕಟ್ಟಡದಲ್ಲಿ ನರ್ಸಿಂಗ್ಕಾಲೇಜು ಕಾರ್ಯನಿರ್ವಹಿಸುತ್ತಿದ್ದು,ಮೂಲಸೌಕರ್ಯಹಾಗೂ ಅಧ್ಯಾಪಕರ ಕೊರತೆಯೂ ಇದೆ.ಹದಿನಾರುಉಪನ್ಯಾಸಕರು ಅಗತ್ಯವಿರುವಲ್ಲಿಮೂವರೇ ಕಾರ್ಯನಿರ್ವಹಿಸುತ್ತಿದ್ದಾರೆ.ಇದರಿಂದಕಲಿಕೆ,ಪರೀಕ್ಷೆಗೆತೊಂದರೆಯಾಗುತ್ತಿದೆ ಎಂದುವಿದ್ಯಾರ್ಥಿಗಳು ಅಸಮಾಧಾನಹೊರಹಾಕಿದರು.
ವಿದ್ಯಾರ್ಥಿಗಳುತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಕರ್ನಾಟಕದಕ್ಷಿಣ ಪ್ರಾಂತ್ಯ ರಾಜ್ಯ ಸಹಸಂಚಾಲಕಗಣೇಶ್ ಪೂಜಾರಿ,ಜಿಲ್ಲಾಸಂಚಾಲಕ ಶ್ರೇಯಸ್ ಅಂಚನ್,ತಾಲೂಕುಸಂಚಾಲಕ ಸುಶಾನ್,ನಸಿರ್ಂಗ್ಕಾಲೇಜು ವಿದ್ಯಾರ್ಥಿಗಳುಉಪಸ್ಥಿತರಿದ್ದರು.
ನರ್ಸಿಂಗ್ಕಾಲೇಜು ಕಾರ್ಯಾಚರಿಸುತ್ತಿರುವತಾಲೂಕು ಆಸ್ಪತ್ರೆಯ ಹಳೇ ಕಟ್ಟಡಸೋರುತ್ತಿದ್ದು,ಕುಸಿಯುವಭೀತಿ ಎದುರಿಸುತ್ತಿದೆ.ಶೌಚಗೃಹಗಳೂಶಿಥಿಲಾವಸ್ಥೆಯಲ್ಲಿದ್ದು,ವಿದ್ಯಾರ್ಥಿಗಳುಹೊಸ ಕಟ್ಟಡದಲ್ಲಿರುವ ಶೌಚಾಲಯಬಳಸುತ್ತಿದ್ದಾರೆ.ಕಚೇರಿಕೆಲಸಕ್ಕೂ ಸಿಬ್ಬಂದಿ ಕೊರತೆಯಿದೆ.ಕ್ಷೇತ್ರಗಳಭೇಟಿಗೆ ಅಗತ್ಯವುಳ್ಳ ಬಸ್ ವ್ಯವಸ್ಥೆಕೂಡ ಇಲ್ಲ.