ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿಗೆ ಅವಹೇಳನ

Crime
Crime
Published on
ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಕೇರಳದ ಮೇಕಪ್ ಆರ್ಟಿಸ್ಟ್, ಮಂಗಳಮುಖಿ ಜಾನ್ ಮನಿ ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನರೇಂದ್ರ ಮೋದಿಯವರನ್ನು ಮತ್ತು ಅವರ ತಾಯಿಯನ್ನು ಜಾನ್‌ಮನಿ ಅತ್ಯಂತ ಕೀಳಾಗಿ ಹಾಗೂ ಅವಹೇಳನಕಾರಿಯಾಗಿ ನಿಂದಿಸಿ ಸಂದೇಶ ಹಾಕಿದ್ದಾನೆ. ಈ ಬಗ್ಗೆ ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಬಾಲಗೋಕುಲ ಮಂಜೇಶ್ವರ ತಾಲೂಕು ಉಪಾಧ್ಯಕ್ಷ ಮಧುಸೂಧನ್ ಆಚಾರ್ಯ, ಮಾಜಿ ಪಂಚಾಯಿತಿ ಸದಸ್ಯರಾದ ಮೋಹನ ಕೆ.ಬಂಬ್ರಾಣ, ಸ್ವಯಂಸೇವಕರಾದ ಶ್ರೇಯಸ್ ಉಜಾರು, ಪ್ರಸಾದ್, ಮಂಜುನಾಥ ರೈ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net