

ಉಡುಪಿ: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ಅಲ್ಲದೆ, ಪರಸ್ಪರ ಸಹಕಾರ ಮನೋಭಾವವನ್ನೂ ಮೂಡಿಸುತ್ತದೆ. ವಾರ್ಷಿಕ ಶಿಬಿರಗಳ ಮೂಲಕ ವಿದ್ಯಾರ್ಥಿಗಳಗೆ ಶ್ರಮದಾನದ ಮಹತ್ವವೂ ಅರಿವಿಗೆ ಬರುತ್ತದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಎನ್ಎಸ್ಎಸ್ ವತಿಯಿಂದ ಕಾಪು ಮಹಾದೇವಿ ಪ್ರೌಢಶಾಲೆಯಲ್ಲಿ ವಾರಗಳ ಕಾಲ ನಡೆದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಂಶುಪಾಲ ನಾಗರಾಜ, ಕಾಪು ಬೀಚ್ ಫ್ರೆಂಡ್ಸ್ ಅಧ್ಯಕ್ಷ ಚಂದ್ರಶೇಖರ, ಮಾಧವ ಪಾಲನ್, ಮಮತಾ ಶೆಟ್ಟಿ, ವಿದ್ವಾನ್ ಪ್ರಕಾಶ ಅಮ್ಮಣ್ಣಯ್ಯ, ಮಧುಕರ ಅಂಚನ್, ಕಾಲೇಜ್ನ ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ಸುಮಾ ಪ್ರಾರ್ಥಿಸಿದರು. ಶಿಬಿರಾಧಿಕಾರಿ ಪರಮೇಶ್ವರ ಎಂ. ಮೊಗವೀರ ಸ್ವಾಗತಿಸಿ, ವರದಿ ವಾಚಿಸಿದರು. ಆಶಾ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಕಾಂತ ವಂದಿಸಿದರು.
ಒಂದು ವಾರದ ಈ ಶಿಬಿರವನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಉದ್ಘಾಟಿಸಿ, ಪರಿಸರದ ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಶಿಬಿರದ ಮೂಲಕ ಶ್ರಮದಾನ ಮಾಡಲಿರುವ ವಿದ್ಯಾರ್ಥಿಗಳಿಗೆ ಭವಿಷ್ಯದ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದರು.
ಶಿಬಿರಾಧಿಕಾರಿ ಪರಮೇಶ್ವರ ಎಂ. ಮೊಗವೀರ ನೇತೃತ್ವದಲ್ಲಿ 50 ವಿದ್ಯಾರ್ಥಿಗಳು ಕಾಪು ಬೀಚ್, ಕಾಪು ಪಟ್ಟಣದ ಪರಿಸರದಲ್ಲಿದ್ದ ಸುಮಾರು 10 ಕ್ವಿಂಟಾಲ್ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಯೋಗ, ಕಾನೂನು ತಿಳಿವಳಿಕೆ, ಪರಿಸರ ವಿಷಯಕ್ಕೆ ಸಂಭಂದಿಸಿದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.