ವ್ಯಕ್ತಿತ್ವ ನಿರ್ಮಾಣದ ವೇದಿಕೆ ಎನ್​ಎಸ್​ಎಸ್​ ಶಿಬಿರ

ನೀಲಾವರದಲ್ಲಿ ಆಯೋಜಿಸಿದ್ದ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್​ಎಸ್​ಎಸ್​ ಶಿಬಿರವನ್ನು ಲಾಲಾಜಿ ಆರ್​. ಮೆಂಡನ್​ ಉದ್ಘಾಟಿಸಿದರು. ಡಾ.ಚಂದ್ರಕಾಂತ ಭಟ್​, ಟಿ.ಪ್ರಶಾಂತ ಹೊಳ್ಳ, ಮಹೇಂದ್ರಕುಮಾರ್​, ಡಾ. ರಾಘವೇಂದ್ರ ಎಲ್​., ಚಿರಂಜನ್​ ಕೆ. ಶೇರಿಗಾರ್​, ಡಾ.ಪ್ರಜ್ಞಾ ಮಾರ್ಪಳ್ಳಿ ಇದ್ದರು.
ನೀಲಾವರದಲ್ಲಿ ಆಯೋಜಿಸಿದ್ದ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್​ಎಸ್​ಎಸ್​ ಶಿಬಿರವನ್ನು ಲಾಲಾಜಿ ಆರ್​. ಮೆಂಡನ್​ ಉದ್ಘಾಟಿಸಿದರು. ಡಾ.ಚಂದ್ರಕಾಂತ ಭಟ್​, ಟಿ.ಪ್ರಶಾಂತ ಹೊಳ್ಳ, ಮಹೇಂದ್ರಕುಮಾರ್​, ಡಾ. ರಾಘವೇಂದ್ರ ಎಲ್​., ಚಿರಂಜನ್​ ಕೆ. ಶೇರಿಗಾರ್​, ಡಾ.ಪ್ರಜ್ಞಾ ಮಾರ್ಪಳ್ಳಿ ಇದ್ದರು.
Published on

* ಮಾಜಿ ಶಾಸಕ ಲಾಲಾಜಿ ಆರ್​. ಮೆಂಡನ್​ ಅಭಿಪ್ರಾಯ
* ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಶಿಬಿರ ಉದ್ಘಾಟನೆ

ಉಡುಪಿ: ರಾಷ್ಟ್ರೀಯ ಸೇವಾ ಯೋಜನಾ ಘಟಕ (ಎನ್​ಎಸ್​ಎಸ್​)ದ ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳಿಗೆ ಜೀವನದ ಬಹುದೊಡ್ಡ ಪಾಠ ಕಲಿಸುವ ಯೋಜನೆ. ಶಿಬಿರದ ಮೂಲಕ ವಿದ್ಯಾರ್ಥಿಗಳು ಸಹಜೀವನ, ಸೌಹಾರ್ದ, ಸದವಕಾಶಗಳ ಕುರಿತು ಅಮೂಲ್ಯ ಅನುಭವ ಗಳಿಸುವ ಮೂಲಕ ಇತರೆಲ್ಲ ವಿದ್ಯಾರ್ಥಿಗಳಿಗಿಂತ ಭಿನ್ನವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾದ ವೇದಿಕೆಯಾಗಿದೆ ಎಂದು ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್​. ಮೆಂಡನ್​ ಅಭಿಪ್ರಾಯಪಟ್ಟರು.
ನೀಲಾವರದ ಶಾರದಾ ಸಭಾಭವನದಲ್ಲಿ ಆಯೋಜಿಸಿದ್ದ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್​ಎಸ್​ಎಸ್​ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್​ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ ಹೊಳ್ಳ, ನೀಲಾವರ ಗ್ರಾಪಂನ ಮಾಜಿ ಅಧ್ಯಕ್ಷ ಮಹೇಂದ್ರಕುಮಾರ್​, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್​., ಎನ್​ಎಸ್​ಎಸ್​ ಯೋಜನಾಧಿಕಾರಿ ಚಿರಂಜನ್​ ಕೆ. ಶೇರಿಗಾರ್​, ಘಟಕ ನಾಯಕರಾದ ದಿಲೀಪಕುಮಾರ್​, ಸಂಚಿತಾ, ತ್ರಿಷಾ ಉಪಸ್ಥಿತರಿದ್ದರು.
ಎನ್​ಎಸ್​ಎಸ್​ ಯೋಜನಾಧಿಕಾರಿ ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿನಿ ಆಷ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಘಟಕ ನಾಯಕ ವಿಶ್ವಾಸ್​ ಕರ್ವಾಲೋ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net