ಉಮರ್ ಫಾರೂಕ್ ಕಾಸರಗೋಡು, ದ.ಕ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳಿಂದ ಬ್ಯಾಟರಿ ಕಳವುಗೈಯುವ ತಂಡದ ಮುಖ್ಯ ಸೂತ್ರಧಾರನಾಗಿದ್ದು, ಹಲವು ತಿಂಗಳಿಂದ ಕರ್ನಾಟಕ ಹಾಗೂ ಕೇರಳ ಪೊಲೀಸರು ಆತನಿಗೆ ಹುಡುಕಾಟ ನಡೆಸುತ್ತಿದ್ದರು.
ಆತ ಮುಳ್ಳೇರಿಯ ಪಳ್ಳ ನಿವಾಸಿ ಸಾಬಿತ್ ಎಂಬಾತನೊಂದಿಗೆ ಸೇರಿ ಕಾರನ್ನು ಬಾಡಿಗೆಗೆ ಪಡೆದು ಮಾವಿನಕಟ್ಟೆಯ ಕ್ಷೇತ್ರವೊಂದರ ಕಾಣಿಕೆ ಹುಂಡಿ ಕಳವುಗೈದಿದ್ದನು. ಬಳಿಕ ಅದೇ ಕಾರಿನಲ್ಲಿ ಮುಳ್ಳೇರಿಯಾದ ಮನೆಯೊಂದರಿಂದ ಎರಡು ಕ್ವಿಂಟಾಲ್ ಅಡಿಕೆ ಕಳವು ಮಾಡಿದ್ದನು. ಪೊಲೀಸರು ತನ್ನ ಚಲನವಲನದ ಬಗ್ಗೆ ನಿಗಾಯಿರಿಸದಂತೆ ಮೊಬೈಲ್ ಬಳಸದೆ ಇತರರಿಂದ ಮೊಬೈಲ್ ಪಡೆದು ಕುಟುಂಬದವರನ್ನು ಸಂಪರ್ಕಿಸುತ್ತಿದ್ದನು.