ಮಾಡುವ ಕೆಲಸದಲ್ಲಿರಲಿ ಅತ್ಯಂತ ಖುಷಿ

ಉಡುಪಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ನೋಟ್​ಬುಕ್​ ವಿತರಿಸಲಾಯಿತು. ಡಾ. ಅಶೋಕ್​ ಕಾಮತ್​, ನಿರಾಲಿ ವೋರಾ, ಅಲ್ಕಾ ಪೈ, ಇಂದಿರಾ ಬಿ., ಕಾವ್ಯಾ ನಾಯಕ್​, ಲತಾ,  ತಾರಾದೇವಿ, ವಿಮಲಾ ಶೇಟ್​, ನವೀನ್​ ಉಪಸ್ಥಿತರಿದ್ದರು.
ಉಡುಪಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ನೋಟ್​ಬುಕ್​ ವಿತರಿಸಲಾಯಿತು. ಡಾ. ಅಶೋಕ್​ ಕಾಮತ್​, ನಿರಾಲಿ ವೋರಾ, ಅಲ್ಕಾ ಪೈ, ಇಂದಿರಾ ಬಿ., ಕಾವ್ಯಾ ನಾಯಕ್​, ಲತಾ, ತಾರಾದೇವಿ, ವಿಮಲಾ ಶೇಟ್​, ನವೀನ್​ ಉಪಸ್ಥಿತರಿದ್ದರು.
Published on

* ವಿದ್ಯಾರ್ಥಿಗಳಿಗೆ ಡಾ. ಅಶೋಕ್​ ಕಾಮತ್​ ಕಿವಿಮಾತು

* ಸರ್ಕಾರಿ ಬಾಲಕಿಯರ ಹೈಸ್ಕೂಲ್​ನಲ್ಲಿ ನೋಟ್​ಬುಕ್​ ವಿತರಣೆ

ಉಡುಪಿ: ಇಂದಿನ ಮಕ್ಕಳಲ್ಲಿ ಮೊಬೈಲ್​ ಗೀಳು ಹೆಚ್ಚುತ್ತಿರುವುದು ಆತಂಕದ ವಿಚಾರ. ಮೊಬೈಲ್​ನ ಅಗತ್ಯೆತೆ ಖಂಡಿತ ಇದೆ. ಆದರೆ, ದಿನದಲ್ಲಿ ಎಷ್ಟು ಸಮಯ ಮೊಬೈಲ್​ ನೋಡಬೇಕು ಎಂಬ ಕುರಿತು ವಿದ್ಯಾರ್ಥಿಗಳು ಅಭ್ಯಾಸದ ಟೈಮ್​ ಟೇಬಲ್​ನಲ್ಲಿ 'ಸ್ಕ್ರೀನ್​ ಟೈಮ್​' ಕೂಡ ಅಳವಡಿಸಿಕೊಳ್ಳಬೇಕು. ಮಾಡುವ ಯಾವುದೇ ಕೆಲಸವನ್ನು ಅತ್ಯಂತ ಖುಷಿಯಿಂದ ಮಾಡಬೇಕು. ದಾನಿಗಳು ನೀಡಿದ ನೋಟ್​ ಬುಕ್​ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉಡುಪಿಯ ಡಯಟ್​ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​ ಕಿವಿಮಾತು ಹೇಳಿದರು.
ಉಡುಪಿಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ನೋಟ್​ ಬುಕ್​ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೌಢಶಾಲೆಯ 343 ವಿದ್ಯಾರ್ಥಿನಿಯರಿಗೆ ಹಿರಿಯಡ್ಕದ ಜನೆಸಿಸ್​ ಪ್ಯಾಕೆಜಿಂಗ್​ ಪ್ರೈ.ಲಿ.ನ ಮುಖ್ಯಸ್ಥೆ ನಿರಾಲಿ ವೋರಾ ಅವರು ಕೊಡುಗೆಯಾಗಿ ನೀಡಿದ 2.5 ಲಕ್ಷ ರೂ. ಮೌಲ್ಯದ ನೋಟ್​ ಬುಕ್​ ವಿತರಿಸಿದರು. ನವನೀತ್​ ಪಬ್ಲಿಕೇಶನ್​ನ ಗುಣಮಟ್ಟದ ಪುಸ್ತಕಗಳ ವಿತರಣೆಯ ಜವಾಬ್ದಾರಿಯನ್ನು ಒನ್​ ಗುಡ್​ ಸ್ಟೆಪ್​ ಬೆಂಗಳೂರು ಸಂಸ್ಥೆಯ ಅಲ್ಕಾ ಪೈ ವಹಿಸಿಕೊಂಡಿದ್ದರು.
ಎಸ್​ಡಿಎಂಸಿ ಅಧ್ಯಕ್ಷೆ ಕಾವ್ಯಾ ನಾಯಕ್​, ಗೌರವಾಧ್ಯಕ್ಷೆ ತಾರಾದೇವಿ, ಸದಸ್ಯರಾದ ಲತಾ, ವಿಮಲಾ ಶೇಟ್​ ಮತ್ತು ನವೀನ್​ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಇಂದಿರಾ ಬಿ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಸಂತ್​ ಕಾರ್ಯಕ್ರಮ ನಿರೂಪಿಸಿದರು. ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಅವನಿ ಎಂ. ಮೇಸ್ತ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net