ಉಪ್ಪಿನಂಗಡಿ: ಪೆರ್ನೆಯ ಮೈರಕಟ್ಟೆ ಎಂಬಲ್ಲಿ ಶನಿವಾರ ಮಕ್ಕಳನ್ನು ಬಾವಿಗೆಸೆದು ಒಂದು ಮಗುವಿನ ಸಾವಿಗೆ ಕಾರಣಳಾದ ನೂರಿನ್ನೀಸಾಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ತನ್ನ 2 ವರ್ಷದ ಹೆಣ್ಣು ಮಗು ಆಲಿಯಾ ಮತ್ತು ಗಂಡನ ತಂಗಿಯ 3 ವರ್ಷದ ಗಂಡು ಮಗು ರಬೀಹ್‌ನನ್ನು ಬಾವಿಗೆ ಎಸೆದಿದ್ದು, ರಬೀಹ್ ಮೃತಪಟ್ಟಿದ್ದು, ಆಲಿಯಾ ಗಂಭೀರ ಗಾಯಗೊಂಡಿದ್ದಳು. ಪುತ್ತೂರು ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಿದ್ದು, ನ್ಯಾಯಾಲಯ ಆಕೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಆರೋಪಿತೆ ನೂರುನ್ನೀಸಾ ಮತ್ತು ಪತಿ ಸಿನಾನ್ ಮಧ್ಯೆ ಕಲಹ ನಡೆದಿದ್ದು, ಸೆ.19ರಂದು ಫೋನ್‌ನಲ್ಲಿ ಮಾತನಾಡುತ್ತಾ ಜಗಳ ಉಂಟಾಗಿದೆ. ಇದರಿಂದ ಕೋಪಗೊಂಡ ನೂರುನ್ನೀಸಾ ಮನೆಯಲ್ಲಿ ಇದ್ದ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದಿರುವುದಾಗಿ ಆರೋಪಿಸಲಾಗಿ ಪ್ರಕರಣ ದಾಖಲಿಸಲಾಗಿತ್ತು.