ಶಬ್ದ ಮಾಲಿನ್ಯ ಮೌನ ಕೊಲೆಗಾರ

 ವಿಶ್ವ ’ಶ್ರವಣ ದಿನ’ದ ಸಭಾ ಕಾರ್ಯಕ್ರಮವನ್ನು  ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಕುಮಾರ್ ಉದ್ಘಾಟಿಸಿದರು. ನಿಟ್ಟೆ ವಿವಿ ಉಪಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಸುರತ್ಕಲ್ ಎನ್‌ಐಟಿಕೆ ನಿವೃತ್ತ ಡೀನ್ ಪ್ರೊ.ಜಿ.ಶ್ರೀನಿಕೇತನ್, ಐಸಿಆರ್ ಸಿಆರ್‌ಎಲ್ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಇನ್ನಿತರರು ಉಪಸ್ಥಿತರಿದ್ದರು.
ವಿಶ್ವ ’ಶ್ರವಣ ದಿನ’ದ ಸಭಾ ಕಾರ್ಯಕ್ರಮವನ್ನು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಕುಮಾರ್ ಉದ್ಘಾಟಿಸಿದರು. ನಿಟ್ಟೆ ವಿವಿ ಉಪಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಸುರತ್ಕಲ್ ಎನ್‌ಐಟಿಕೆ ನಿವೃತ್ತ ಡೀನ್ ಪ್ರೊ.ಜಿ.ಶ್ರೀನಿಕೇತನ್, ಐಸಿಆರ್ ಸಿಆರ್‌ಎಲ್ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಇನ್ನಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಜನರ ಜೀವನ ಶೈಲಿಯೂ ಶ್ರವಣ ದೋಷಕ್ಕೆ ಕಾರಣ. ಶಬ್ದ ಮಾಲಿನ್ಯ ಎನ್ನುವುದು ’ಮೌನ ಕೊಲೆಗಾರ’ ಆಗಿರುವುದರಿಂದ ಕಿವಿಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಅಗತ್ಯ, ಎಂಆರ್‌ಪಿಎಲ್ ಸಂಸ್ಥೆ ಸಾಮಾಜಿಕ ಜವಾಬ್ದಾರಿಯಡಿ ಜಾಗೃತಿ ಕಾರ್ಯಕ್ರಮಗಳಲ್ಲಿ ಕೈಜೋಡಿಸಿದೆ ಎಂದು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಕುಮಾರ್ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾಲಯ (ಪರಿಗಣಿತ) ಅಧೀನದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ನಾಸಾಕರ್ಣ ಕಂಠಶಾಸ್ತ್ರ (ಓಟೋರಿನೋಲರಿಂಗಾಲಜಿ) ವಿಭಾಗದ ವತಿಯಿಂದ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಗುರುವಾರ ’ವಿಶ್ವ ಶ್ರವಣ ದಿನ’ದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ವಿವಿ ಐಸಿಆರ್ ಸಿಆರ್‌ಎಲ್ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಜನರಿಗೆ ಕಣ್ಣಿನ ಬಗ್ಗೆ ಅಪಾರ ಕಾಳಜಿ ಇರುತ್ತದೆ, ಆದರೆ ಕಿವಿಯ ವಿಚಾರದಲ್ಲಿ ಅಂತಹ ಕಾಳಜಿ ತೋರ್ಪಡಿಸದೆ ಕಸದ ಬುಟ್ಟಿಯಂತೆ ಸಿಕ್ಕ ವಸ್ತುಗಳನ್ನು ಹಾಕುತ್ತಾರೆ. ಈ ಬಗ್ಗೆ ವಿವಿಧ ವರ್ಗದ ಉದ್ಯೋಗಿಗಳಿಗೆ ಜಾಗೃತಿ ಮೂಡಿಸಿದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಶ್ರವಣ ದೋಷದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ’ನಿಶಬ್ದ’ ಹೆಸರಿನಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ನಿಟ್ಟೆ ವಿವಿ ಉಪಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಸುರತ್ಕಲ್ ಎನ್‌ಐಟಿಕೆ ನಿವೃತ್ತ ಡೀನ್ ಪ್ರೊ.ಜಿ.ಶ್ರೀನಿಕೇತನ್, ಕೆಎಸ್ ಪಿಸಿಬಿ ಪರಿಸರ ಅಧಿಕಾರಿ ಡಾ.ಮಹೇಶ್ವರಿ ಸಿಂಗ್, ನಿಟ್ಟೆ ವಿವಿ ಐಸಿಆರ್ ಸಿಆರ್‌ಎಲ್ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ, ಕ್ಷೇಮಾ ಡೀನ್ ಪ್ರೊ.ಬಿ.ಸಂದೀಪ್ ರೈ ಮೊದಲಾದವರು ಉಪಸ್ಥಿತರಿದ್ದರು.
ಇಎನ್ ಟಿ ವಿಭಾಗ ಮುಖ್ಯಸ್ಥ ವಾದೀಶ್ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ.ಶ್ರವಣ್ ಆಳ್ವ ವಂದಿಸಿದರು. ಡಾ.ನೀಮಾ ಕಾರ್ಯಕ್ರಮ ನಿರೂಪಿಸಿದರು.

’ಭೂತಕೋಲ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳಲ್ಲಿ ವಿಜೃಂಭಣೆಗಾಗಿ ಗರ್ನಲ್ ಸಿಡಿಸಿ ಅನಗತ್ಯ ಶಬ್ದಮಾಲಿನ್ಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ ಪ್ರಶಾಂತ ವಾತಾವರಣ ಇದ್ದರೆ ಸಿಗುವ ನೆಮ್ಮದಿ ಎಲ್ಲೂ ಸಿಗುವುದಿಲ್ಲ. ಆದರೆ ನಾವು ಶಬ್ದ ಉಂಟುಮಾಡಿ ವಾತಾವರಣ ಕೆಡಿಸುತ್ತಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net