ಬೆಳಪು ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು. ಯು.ಸಿ.ಶೇಖಬ್ಬ, ಪ್ರವೀಣ್ ಡಿಸೋಜ, ಚಂದ್ರಾವತಿ ವಿ.ಆಚಾರ್ಯ ಇದ್ದರು.
Published on:
Copied
Follow Us
ಖಾತ್ರಿ ಯೋಜನೆ ಹೆಸರಲ್ಲಿ ರಾಜಕಾರಣ ಬೇಡ
*ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿಕೆ
ಪಡುಬಿದ್ರಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅದೇ ಹೆಸರಿನಲ್ಲಿ ಮುಂದುವರಿಯಬೇಕು. ಕೇಂದ್ರ ಸರ್ಕಾರ ಬೇಕಿದ್ದರೆ ಇನ್ನೊಂದು ಬಡವರ ಪರ ಯೋಜನೆಯಾಗಿ ಬಿ-ಜಿ ರಾಮ್ ಜಿ ಮಸೂದೆ ತಂದರೆ ಉತ್ತಮ. ಹೆಸರಿನಲ್ಲಿ ರಾಜಕಾರಣ ಮಾಡದೆ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಸಂಭಾವನೆ ಹೆಚ್ಚು ಮಾಡುವ ಬಗ್ಗೆ ಚಿಂತನೆ ನಡೆಸಲಿ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ಕುರಿತಂತೆ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಭಾರತದ ಪಿತಾಮಹ. ಅವರು ಯಾವುದೇ ಪಕ್ಷದ ವ್ಯಕ್ತಿಯಲ್ಲ. ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ದೇಶದ ಏಕತೆಗಾಗಿ, ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿಗಾಗಿ ಸರ್ವವನ್ನೂ ತ್ಯಾಗ ಮಾಡಿ ಹೋರಾಟಕ್ಕೆ ಇಳಿದು ಶಾಂತಿಯ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ಒದಗಿಸಿಕೊಟ್ಟವರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅವರ ಸಂಕಲ್ಪಕ್ಕೆ ನೀಡುವ ಗೌರವ. ಈಗ ಯೋಜನೆ ಹೆಸರನ್ನು ಬದಲಾಯಿಸಿದೆ ಅವರ ಹೆಸರಿನಲ್ಲಿಯೇ ಮುಂದುವರಿಯಬೇಕು ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಯು.ಸಿ.ಶೇಖಬ್ಬ, ಸದಸ್ಯ ಶರತ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿಸೋಜ, ಕಾರ್ಯದರ್ಶಿ ಚಂದ್ರಾವತಿ ವಿ.ಆಚಾರ್ಯ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.