

ಪುರುಷೋತ್ತಮ ಪೆರ್ಲ ಕಾಸರಗೋಡು
ಭರವಸೆಗಿಲ್ಲ ಕೊರತೆ
ಕಡಲ್ಕೊರೆತದಿಂದಾಗಿ ಏಳು ಕೊಠಡಿಗಳ ಮನೆ ಸಮುದ್ರಪಾಲಾಗಿದ್ದು, ನಮ್ಮ ಕುಟುಂಬ ಬೀದಿಪಾಲಾಗಿದೆ. ಶಾಶ್ವತ ತಡೆಗೋಡೆ ನಿರ್ಮಿಸಿದ್ದರೆ ನಮ್ಮ ಮನೆ ಉಳಿಯುತ್ತಿತ್ತು. ಕಡಲ್ಕೊರೆತ ತಡೆಗಟ್ಟಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರತಿ ವರ್ಷ ಭರವಸೆ ನೀಡುತ್ತಿದ್ದು, ಈವರೆಗೂ ಈಡೇರಿಲ್ಲ.
— ಪ್ರಸೀದಾ, ಉಪ್ಪಳ ಶಾರದಾನಗರ, ಮನೆ ಕಳೆದುಕೊಂಡ ಸಂತ್ರಸ್ತೆ
ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಗ್ರ ಅಧ್ಯಯನ ನಡೆಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಕ್ಷುಬ್ಧ ಸಮುದ್ರದಂಥ ಪರಿಸ್ಥಿತಿ ಸೇರಿದಂತೆ ಯಾವುದೇ ವಿಪತ್ತು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
— ಅರ್ಜುನ್ ಪಾಂಡಿಯನ್, ಜಿಲ್ಲಾಧಿಕಾರಿ