ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ, ಹೋಟೆಲ್ ಕೆಲಸ, ಮಾರುಕಟ್ಟೆ ಹೊರೆ ಹೊರುವುದು, ಲಾರಿಗಳ ಲೋಡ್ ಅನ್ಲೋಡ್, ಅನೇಕ ೇತ್ರಗಳಲ್ಲಿ ದುಡಿಯುವವರು ಇದೇ ವಲಸೆ ಕಾರ್ಮಿಕರು. ಆದರೆ ದಿನಪೂರ್ತಿ ದುಡಿದು ನಗರ ಕಟ್ಟುವ ಕೈಗಳಿಗೆ ರಾತ್ರಿ ಮಲಗಲು ಸುರತ ಛಾವಣಿಯೇ ಇಲ್ಲದಿರುವುದು ಸರ್ಕಾರಿ ವ್ಯವಸ್ಥೆಯನ್ನು ಅಣಕಿಸುವಂತಿದೆ. ವಲಸೆ ಕಾರ್ಮಿಕರಿಗೆ ನೆಲೆ ಒದಗಿಸಲು 2017ರಲ್ಲಿ ಸಹಾಯಕ ಕಮಿಷನರ್ ಶಿಲ್ಪಾನಾಗ್ ಹೊಸ ಬಸ್ ನಿಲ್ದಾಣದಲ್ಲಿ ಪುರಸಭೆ ವಾಣಿಜ್ಯ ಸಂಕೀರ್ಣದ ಮೇಲ್ಗಡೆ ಶೆಲ್ಟರ್ ನಿರ್ಮಿಸಿದ್ದರು. ಸದ್ಯ ಅದು ಮೂಲೆಗುಂಪಾಗಿದೆ.