ಸರ್ಕ್ಯೂಟ್ರಿಕ್ಸ್ ಸ್ಪರ್ಧೆಯಲ್ಲಿ ನಿಟ್ಟೆ ಕಾಲೇಜು ದ್ವಿತೀಯ

ಸರ್ಕ್ಯೂಟ್ರಿಕ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು.
ಸರ್ಕ್ಯೂಟ್ರಿಕ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ‘ಸರ್ಕ್ಯೂಟ್ರಿಕ್ಸ್ ಸರ್ಕ್ಯೂಟ್ ಡಿಸೈನ್ ಮತ್ತು ಡೀಬಗ್ಗಿಂಗ್’ ಸ್ಪರ್ಧೆ
  • ಧನುಷ್ ಎಸ್.ಪೂಜಾರಿ, ಆಕಾಶ್ ಶೆಟ್ಟಿ ರನ್ನರ್‌ಅಪ್
ಕಾರ್ಕಳ: ಎಸ್‌ಡಿಎಂ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಇತ್ತೀಚೆಗೆ ನಡೆದ ಸೃಷ್ಟಿ ಇನ್ನೋವೇಶನ್ ಎಕ್ಸ್‌ಚೇಂಜ್- 2026ರ ಸಮಯದಲ್ಲಿ ನಡೆದ ರಾಜ್ಯಮಟ್ಟದ ‘ಸರ್ಕ್ಯೂಟ್ರಿಕ್ಸ್ ಸರ್ಕ್ಯೂಟ್ ಡಿಸೈನ್ ಮತ್ತು ಡೀಬಗ್ಗಿಂಗ್’ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ನಾಲ್ಕನೇ ಸೆಮಿಸ್ಟರ್ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ(ಇಸಿಇ) ವಿದ್ಯಾರ್ಥಿಗಳಾದ ಧನುಷ್ ಎಸ್.ಪೂಜಾರಿ ಮತ್ತು ಆಕಾಶ್ ಶೆಟ್ಟಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯಾದ್ಯಂತದ ವಿವಿಧ ಇಂಜಿನಿಯರಿಂಗ್ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸರ್ಕ್ಯೂಟ್ ವಿನ್ಯಾಸ, ಟ್ರಬಲ್ ಶೂಟಿಂಗ್ ಮತ್ತು ಡೀಬಗ್ಗಿಂಗ್‌ನಲ್ಲಿ ತಮ್ಮ ಕೌಶಲ ಪ್ರದರ್ಶಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹುಮಾನ ವಿತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net