ವಿಶ್ವಾಸಾರ್ಹತೆಯಲ್ಲಿ ಪತ್ರಿಕೆ, ದೃಶ್ಯ ಮಾಧ್ಯಮ ಮಂಚೂಣಿ

 ಸಮಾಜ ಸೇವಕ, ಪತ್ರಕರ್ತ ಐಕಳ ಜಯಪಾಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪುಷ್ಪರಾಜ್ ಬಿ.ಎನ್., ಡಾ.ಹರಿಕೃಷ್ಣ ಪುನರೂರು ಮೊದಲಾದವರಿದ್ದರು.
ಸಮಾಜ ಸೇವಕ, ಪತ್ರಕರ್ತ ಐಕಳ ಜಯಪಾಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪುಷ್ಪರಾಜ್ ಬಿ.ಎನ್., ಡಾ.ಹರಿಕೃಷ್ಣ ಪುನರೂರು ಮೊದಲಾದವರಿದ್ದರು.
Published on
ಮೂಲ್ಕಿ: ಸಮೂಹ ಮಾಧ್ಯಮಗಳು ವಿವಿಧ ಕ್ಷೇತ್ರದಲ್ಲಿ ಬೆಳೆದಿದ್ದರೂ ಇಂದಿಗೂ ಸುದ್ದಿ ವಿಶ್ವಾಸಾರ್ಹತೆಯಲ್ಲಿ ಪತ್ರಿಕೆ ಮತ್ತು ದೃಶ್ಯ ಮಾದ್ಯಮ ಮಂಚೂಣಿಯಲ್ಲಿದೆ ಎಂದು ದ.ಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪುಷ್ಪರಾಜ್ ಬಿ.ಎನ್.ಹೇಳಿದರು.
ಮೂಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಿಲ್ಪಾಡಿ ಶ್ರೀ ಚಂದ್ರಶೇಖರ ಸ್ವಾಮಿ ಸೇವಾಶ್ರಮದ ಸಹಯೋಗದಲ್ಲಿ ಮೂಲ್ಕಿಯಲ್ಲಿ ಗುರುವಾರ ಪತ್ರಿಕಾ ದಿನಾಚರಣೆಯಲ್ಲಿ ಕನ್ನಡ ಪತ್ರಿಕೋದ್ಯಮದ ಬೆಳವಣಿಗೆ ಬಗ್ಗೆ ದಿಕ್ಸೂಚಿ ಮಾತುಗಳನ್ನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮೂಲ್ಕಿ ನೋಟರಿ ವಕೀಲ ಡೇನಿಯಲ್ ದೇವರಾಜ್, ಮೂಲ್ಕಿ ರೋಟರಿ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಉಪಸ್ಥಿತರಿದ್ದರು. ಮೂಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಲೋಕೇಶ್ ಸುರತ್ಕಲ್ ಅಧ್ಯಕ್ಷತೆ ವಹಿಸಿದ್ದರು. ಹರೀಶ್ ಹೆಜ್ಮಾಡಿ ನಿರೂಪಿಸಿದರು. ಕಾರ್ಯದರ್ಶಿ ಪುನೀತಕೃಷ್ಣ ವಂದಿಸಿದರು.

ಪ್ರತಿಭಾನ್ವಿತರಿಗೆ ಸನ್ಮಾನ

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮಾಧವ ಕಾಮತ್ ಕೆಂಚನಕೆರೆ, ಚವನ ಉಡುಪ, ದೇವಾಂಶು ಕೋಟ್ಯಾನ್, ಮನೀಶ್ ಶೆಟ್ಟಿ ಯವರನ್ನು ಗೌರವಿಸಲಾಯಿತು. ಸಮಾಜಸೇವಕರಾಗಿ, ಪತ್ರಕರ್ತರು ಮತ್ತು ಜಾಹಿರಾತು ಪ್ರತಿನಿಧಿಯಾಗಿ ಹಲವು ದಶಕಗಳ ಸೇವೆ ನೀಡುತ್ತಾ ಬರುತ್ತಿರುವ ಐಕಳ ಜಯಪಾಲ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net