ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಏಕತೆಗೆ ಆದ್ಯತೆ

ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅವರನ್ನು ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ ಅಭಿನಂದಿಸಿತು. ಪ್ರಶಾಂತ್​ ಜತ್ತನ್ನ, ಡೆನಿಸ್​ ಡೆಸಾ, ಐವನ್​ ಸೋನ್ಸ್​, ಕಿಶೋರಕುಮಾರ್​, ಸಂತೋಷ್​, ಪ್ರವೀಣ್​ ಮಾಬೆನ್​,  ಕ್ರಿಸ್ಟೋಫರ್​ ಇತರರಿದ್ದರು.
ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅವರನ್ನು ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ ಅಭಿನಂದಿಸಿತು. ಪ್ರಶಾಂತ್​ ಜತ್ತನ್ನ, ಡೆನಿಸ್​ ಡೆಸಾ, ಐವನ್​ ಸೋನ್ಸ್​, ಕಿಶೋರಕುಮಾರ್​, ಸಂತೋಷ್​, ಪ್ರವೀಣ್​ ಮಾಬೆನ್​, ಕ್ರಿಸ್ಟೋಫರ್​ ಇತರರಿದ್ದರು.
Published on

* ಬಿಷಪ್​ ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಭರವಸೆ

* ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ನಿಂದ ಸನ್ಮಾನ

ಉಡುಪಿ: ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅವರಿಗೆ ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ ಉಡುಪಿ ಜಿಲ್ಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ವಿವಿಧ ಸಭೆಗಳ ಸಭಾಪಾಲಕರು ಮತ್ತು ಧರ್ಮಾಧ್ಯಕ್ಷರೊಂದಿಗೆ ಚರ್ಚಿಸಿದ ನೂತನ ಧರ್ಮಾಧ್ಯಕ್ಷರು, ಜಿಲ್ಲೆಯಲ್ಲಿ ಕ್ರೈಸ್ತ ಏಕತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ನ ಉಪಾಧ್ಯಕ್ಷ ಪ್ರಶಾಂತ್​ ಜತ್ತನ್ನ, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್​ ಡೆಸಾ, ಸಿಎಸ್​ಐ ಸದರ್ನ್​ ಡಯಾಸಿಸ್​ನ ಕೋಶಾಧಿಕಾರಿ ವಂ.ಐವನ್​ ಸೋನ್ಸ್​, ವಲಯ ಸಭಾಪಾಲಕ ವಂ.ಕಿಶೋರಕುಮಾರ್​, ಯುಬಿಎಂ ಚರ್ಚ್​ ಮಣಿಪಾಲ ಸಭಾಪಾಲಕ ವಂ.ಸಂತೋಷ್​, ಸಿಎಸ್​ಐ ಮಣಿಪುರ ಚರ್ಚ್​ನ ವಂ.ಪ್ರವೀಣ್​ ಮಾಬೆನ್​, ಯುಬಿಎಂಸಿ ಕಾರ್ಯದರ್ಶಿ ಕ್ರಿಸ್ಟೋಫರ್​, ಫುಲ್​ ಗೊಸ್ಪಲ್​ ಸಭೆಯ ಪಾಸ್ಟರ್​ ಕೆ.ವಿ. ಪಾವ್ಲ್​, ಅಶೋಕ್​, ಸಿರೋ ಮಲಂಕರ ಬೈಂದೂರಿನ ವಂ.ಡೇವಿಡ್​, ವಂ.ಫಿಲಿಪ್​, ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಐಕ್ಯತಾ ಆಯೋಗದ ನಿರ್ದೇಶಕ ವಂ.ಲಿಯೋ ಪ್ರವೀಣ್​ ಹಾಗೂ ವಿವಿಧ ಸಭೆಗಳ ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net