ಹುಬ್ಬಳ್ಳಿಯಲ್ಲಿ ಮುಂದಿನ ವರ್ಷ ಹೊಸ ಪಕ್ಷ ಘೋಷಣೆ: ನಟ ಚೇತನ್

ನಟ, ಸಾಮಾಜಿಕ ಹೋರಾಟಗಾರ ಚೇತನ್​ ಅಹಿಂಸಾ ಮಾತನಾಡಿದರು.
ನಟ, ಸಾಮಾಜಿಕ ಹೋರಾಟಗಾರ ಚೇತನ್​ ಅಹಿಂಸಾ ಮಾತನಾಡಿದರು.
Published on
ಉಡುಪಿ: ಸಮ ಸಮಾಜ ನಿರ್ಮಾಣ ಗುರಿಯೊಂದಿಗೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲಾಗುತ್ತಿದ್ದು, ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೊಸ ಪಕ್ಷದ ಹೆಸರು ಘೋಷಿಸಲಾಗುವುದು. ಧ್ವಜ ಮತ್ತು ಪ್ರಣಾಳಿಕೆ ಬಿಡುಗಡೆಗೊಳಿಸಲಾಗುವುದು ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್​ ಅಹಿಂಸಾ ಹೇಳಿದರು.

ಬನ್ನಂಜೆಯಲ್ಲಿ ನಡೆದ ರಾಜಕೀಯ ಮುನ್ನೋಟ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಸುಮಾರು 3 ಸಾವಿರ ಪಕ್ಷಗಳು ನೋಂದಣಿಯಾಗಿವೆ. ಆದರೆ ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಯಾವುದೇ ರಾಜಕೀಯ ಪಕ್ಷಗಳು, ಸಂಟನೆಗಳು, ವ್ಯಕ್ತಿಗಳು ನಮ್ಮ ಶತ್ರುಗಳಲ್ಲ. ಅಸಮಾನತೆ ಮತ್ತು ಅನ್ಯಾಯದಿಂದ ಕೂಡಿದ ವ್ಯವಸ್ಥೆ ವಿರುದ್ಧ ಮಾತ್ರ ನಮ್ಮ ಪ್ರತಿರೋಧವಿದೆ. ಅಂಬೇಡ್ಕರ್​, ಪೆರಿಯಾರ್​, ಕಾನ್ಶಿರಾಮ್​ ಅವರ ಸತ್ಯಪಂಥವನ್ನು ಅನುಸರಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ಶೇಖರ ಹಾವಂಜೆ, ಜಯನ್​ ಮಲ್ಪೆ, ಗಣೇಶ್​ ನೇರ್ಗಿ, ಪ್ರಾಂಕಿ ಕೊಳಲಗಿರಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net