ಬುಧವಾರ ಭಾರತೀಯ ಜನತಾಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡಿ ಅಶೀರ್ವಚನ ನೀಡಿದರು.
ಪಕ್ಷದ ರಾಷ್ಟ್ರೀಯ ಕಾರ್ಯಾಲಯ ಕಾರ್ಯದರ್ಶಿ ಮಹೇಂದ್ರ ಪಾಂಡೆ, ಕಾರ್ಯದರ್ಶಿ ಬೋಲಾ ಸಿಂಗ್ ಮತ್ತು ಡಾ.ಸ್ವದೇಶ್ ಸಿಂಗ್, ದೆಹಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಅಭಿಷೇಕ್ ಟಂಡನ್ ಸ್ವಾಮೀಜಿಯವರನ್ನು ಆದರದಿಂದ ಬರಮಾಡಿಕೊಂಡು ಗೌರವಿಸಿದರು. ಬಳಿಕ ಕಾರ್ಯಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶ್ರೀಗಣಪತಿ ಮಂಟಪಕ್ಕೆ ತೆರಳಿ ಗಣೇಶನಿಗೆ ಮಂಗಳಾರತಿ ಬೆಳಗಿದರು.