ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯಕ್ಕೂ ಈ ಸಮಸ್ಯೆ ಅಡ್ಡಿಯಾಗಿದೆ. ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರ ಮಾಹಿತಿಯನ್ನು ಸ್ಥಳದಲ್ಲೇ ದಾಖಲಿಸಿ ಅಪ್‌ಲೋಡ್ ಮಾಡಬೇಕಾದರೂ, ಜನತಾನಗರ, ಬಿ.ಟಿ.ರಸ್ತೆ, ಕುಕ್ಕುಂಜೆ, ಕಡಂದಲೆ ಹಾಗೂ ಜೋಡಿಕಟ್ಟೆ ಪ್ರದೇಶಗಳಲ್ಲಿ ನೆಟ್‌ವರ್ಕ್ ಇಲ್ಲದ ಕಾರಣ ಆನ್‌ಲೈನ್‌ನಲ್ಲಿ ಮಾಹಿತಿ ನವೀಕರಿಸಲು ಸಾಧ್ಯವಾಗುತ್ತಿಲ್ಲ.