ಗ್ರಾಮೀಣ ಭಾಗದಲ್ಲಿ ವರ್ಕ್ ಆಗದ ನೆಟ್

ನೋ ನೆಟ್‌ವರ್ಕ್
ನೋ ನೆಟ್‌ವರ್ಕ್
Published on
ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಡಿಜಿಟಲ್ ಕ್ಷೇತ್ರ ಸಾಕಷ್ಟು ಮುಂದುವರಿದಿದ್ದರೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ನೆಟ್‌ವರ್ಕ್ ಇಲ್ಲದಿರುವುದು ಆಧುನಿಕ ಯುಗದ ವಿಪರ್ಯಾಸವೇ ಸರಿ. ಬಿಳಿನೆಲೆ ಗ್ರಾಮದ ಕೈಕಂಬದ ಕೆಲವು ಪ್ರದೇಶಗಳು ಸೇರಿದಂತೆ ಇಲ್ಲಿಗೆ ಸಮೀಪದ ಭಾಗ್ಯ, ಚೇರು, ಗೋಪಾಳಿ, ಎರ್ವಾಯಿಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂದಿಗೂ ಸಮರ್ಪಕ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆ ಇಲ್ಲದೆ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ತುರ್ತು ಸಂದರ್ಭದಲ್ಲಿ ಕರೆ ವಾಡಲು ಇಲ್ಲಿ ವ್ಯವಸ್ಥೆಯೇ ಇಲ್ಲ. ಈ ಪ್ರದೇಶಗಳು ಇಂದಿಗೂ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದು, ಸರ್ಕಾರಿ ಸೌಲಭ್ಯ, ರೇಷನ್ ಮತ್ತಿತರ ಕೆಲ ಕಾರ್ಯಗಳಿಗೂ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಸಂದರ್ಭದಲ್ಲಿ ಕೈಕಂಬ ಪ್ರದೇಶದ ಹಲವು ಭಾಗಗಳ ಜನರು ಇಂದಿಗೂ ಸರಿಯಾಗಿ ಮೊಬೈಲ್ ನೆಟ್‌ವರ್ಕ್ ಸಿಗದೆ ಪರದಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಶನಿವಾರ ಎರ್ವಾಯಿಲ್ ಬಳಿ ರಾತ್ರಿ ಬಸ್‌ಗೆ ಬೆಂಕಿ ಹತ್ತಿಕೊಂಡಾಗ ಅಗ್ನಿಶಾಮಕ ದಳಕ್ಕೆ ವಾಹಿತಿ ನೀಡುವ ಸಂದರ್ಭದಲ್ಲೂ ನೆಟ್‌ವರ್ಕ್ ಸಮಸ್ಯೆಯ ಗಂಭೀರತೆ ಅರಿವಾಯಿತು. ಇದೇ ರೀತಿ ಹಲವಾರು ವರ್ಷಗಳಿಂದ ಈ ಭಾಗದ ಜನತೆ ತುರ್ತು ಸಂದರ್ಭದಲ್ಲಿ ಸಂಪರ್ಕ ವ್ಯವಸ್ಥೆ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ ಟನೆಗಳಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮೂಲ ಆವಶ್ಯಕತೆಯೇ ಇಲ್ಲ

ನೆಟ್‌ವರ್ಕ್ ಸಮಸ್ಯೆ ಕೇವಲ ಮೊಬೈಲ್‌ನಲ್ಲಿ ವಾತನಾಡಲು ಅಥವಾ ಇಂಟರ್ನೆಟ್ ಬಳಸಲು ಇರುವ ಸಮಸ್ಯೆಯಲ್ಲ. ಇಂದಿನ ದಿನಗಳಲ್ಲಿ ತುರ್ತು ಆರೋಗ್ಯ ಸೇವೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ಯಾವುದೇ ತುರ್ತು ಸೇವೆಯನ್ನು ಸಂಪರ್ಕಿಸಲು ಮೊಬೈಲ್ ನೆಟ್‌ವರ್ಕ್ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು ಹಾಗೂ ಸಾವಾನ್ಯ ಜನರು ಕೂಡ ಪ್ರತಿದಿನದ ಕೆಲಸಗಳಿಗೆ ಮೊಬೈಲ್ ಸಂಪರ್ಕವನ್ನು ಅವಲಂಬಿಸಿರುವ ಸಂದರ್ಭದಲ್ಲಿ ಈ ಭಾಗದ ಜನರು ಅತ್ಯಗತ್ಯವಾದ ಮೂಲಸೌಲಭ್ಯದಿಂದ ವಂಚಿತರಾಗಿರುವುದು ವಿಷಾದನೀಯ.

ಶಾಶ್ವತ ಪರಿಹಾರ ನೀಡಿ

ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಸಮಸ್ಯೆ ಇದೆ ಎನ್ನುವುದು ಎಲ್ಲರಿಗೂ ತಿಳಿದಿದ್ದರೂ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳದಿರುವುದು ಜನರ ಅಸವಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಕೂಡಲೇ ಗಮನಹರಿಸಿ, ಸ್ಥಳ ಪರಿಶೀಲಿಸಿ, ಸಂಬಂಧಪಟ್ಟ ಟೆಲಿಕಾಂ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಕಡೆ ಹೊಸ ಟವರ್ ಸ್ಥಾಪಿಸುವುದು ಅಥವಾ ಈಗಿರುವ ನೆಟ್‌ವರ್ಕ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.

ಚೇರು, ಎರ್ವಾಯಿಲ್ ಮೊದಲಾದ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಈ ಪರಿಸರದ ಸುವಾರು 130 ಮನೆಗಳು ಸೇರಿದಂತೆ ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ಸಮಸ್ಯೆಯಾಗಿದೆ. ಆದ್ದರಿಂದ ಕೈಕಂಬದಲ್ಲಿ ಇರುವ ಟವರ್ ಅನ್ನು ಮೇಲ್ದರ್ಜೆಗೆ ಏರಿಸಿ ನೆಟ್‌ವರ್ಕ್ ಸಮಸ್ಯೆ ನಿವಾರಿಸಬೇಕು. ಇಲ್ಲವಾದರೆ ಚೇರು ಭಾಗದಲ್ಲಿ ಶಾಶ್ವತ ಟವರ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಗುಂಡ್ಯದಿಂದ ಕೈಕಂಬ ತನಕ ನೆಟ್‌ವರ್ಕ್ ಇಲ್ಲ. ಇದರಿಂದ ರಸ್ತೆಯಲ್ಲಿ ತುರ್ತು ಪರಿಸ್ಥಿತಿ ನಿರ್ವಾಣವಾದರೆ ಸಂಕಷ್ಟ ಎದುರಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net