ಅಧಿಕಾರಿಗಳು, ನೌಕರರಿಂದ ಸಾರ್ವಜನಿಕರ ನಿರ್ಲಕ್ಷ್ಯ

ಸಾರ್ವಜನಿಕರ ಕೆಲಸಗಳಿಗೆ ವಿಳಂಬದಿಂದ ಹೆಬ್ರಿ ತಾಲೂಕು ಕಚೇರಿ ವಿರುದ್ಧ ಪ್ರತಿಭಟನೆ ನಡೆಯಿತು. ಪ್ರಮುಖರಾದ ನೀರೆ ಕೃಷ್ಣ ಶೆಟ್ಟಿ, ನವೀನ್ ಕೆ.ಅಡ್ಯಂತಾಯ, ಹೆಬ್ರಿ ಪ್ರವೀಣ್ ಬಲ್ಲಾಳ್ ಮೊದಲಾದವರಿದ್ದರು.
ಸಾರ್ವಜನಿಕರ ಕೆಲಸಗಳಿಗೆ ವಿಳಂಬದಿಂದ ಹೆಬ್ರಿ ತಾಲೂಕು ಕಚೇರಿ ವಿರುದ್ಧ ಪ್ರತಿಭಟನೆ ನಡೆಯಿತು. ಪ್ರಮುಖರಾದ ನೀರೆ ಕೃಷ್ಣ ಶೆಟ್ಟಿ, ನವೀನ್ ಕೆ.ಅಡ್ಯಂತಾಯ, ಹೆಬ್ರಿ ಪ್ರವೀಣ್ ಬಲ್ಲಾಳ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಹೆಬ್ರಿ
ನಾವು ನಿರಂತರವಾಗಿ ಹೋರಾಟ ವಾಡಿ ತಾಲೂಕು ವಾಡಿಸಿದ್ದೇವೆ. ಆದರೆ ಈಗ ಅದೇ ನಮ್ಮ ತಾಲೂಕಿನಲ್ಲಿ ನಮ್ಮ ಜನರ ಕೆಲಸಗಳಿಗೆ ಅಲೆದಾಡಬೇಕಾಗಿದೆ. ಕೆಳ ಹಂತದ ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರನ್ನು ನಿರ್ಲಕ್ಷ್ಯ ವಾಡಿ ಕಚೇರಿ ಕೆಲಸಗಳಿಗೆ ಅಲೆದಾಡಿಸಿ ವಿಳಂಬ ವಾಡುತ್ತಿದ್ದಾರೆ. ಜನರ ಕೆಲಸಗಳನ್ನು ಶ್ರೀವಾಗಿ ವಾಡಿಸಿಕೊಡಿ ಎಂದು ಹೆಬ್ರಿ ಗೋಪಾಲ ಭಂಡಾರಿ ಅಭಿವಾನಿ ವೇದಿಕೆ ಮತ್ತು ಸಾವಾಜಿಕ ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದರು.
ಹೆಬ್ರಿ ಗೋಪಾಲ ಭಂಡಾರಿ ಅಭಿವಾನಿ ವೇದಿಕೆ ಮತ್ತು ಸಾವಾಜಿಕ ಟ್ರಸ್ಟ್ ವತಿಯಿಂದ ಹೆಬ್ರಿ ತಾಲೂಕು ಕಚೇರಿ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ವಾತನಾಡಿದರು.
ಅಕ್ರಮ- ಸಕ್ರಮ ಸಮಿತಿ ಸಭೆ ನಡೆಸಿ ಹಕ್ಕುಪತ್ರಗಳನ್ನು ನೀಡಲು ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಅಕ್ರಮ- ಸಕ್ರಮ ಸಮಿತಿ ಸದಸ್ಯ ನವೀನ್ ಕೆ.ಅಡ್ಯಂತಾಯ ಆಗ್ರಹಿಸಿದರು.
ಹೆಬ್ರಿ ಬಿಜೆಪಿ ಶಕ್ತಿಕೇಂದ್ರ ಪ್ರತಿಭಟನೆಗೆ ಬೆಂಬಲ ನೀಡಿ ಭಾಗವಹಿಸಿದ್ದರು. ಪ್ರತಿಭಟನೆ ವೇಳೆ ಅರ್ಜಿ ಹಿಡಿದು ಬಂದ ಹಲವರನ್ನು ತಹಸೀಲ್ದಾರ್ ಎಸ್.ಎ.ಪ್ರಸಾದ್ ಕೊಠಡಿಗೆ ಕರೆಸಿ ಅಧಿಕಾರಿಗಳ ಸಮ್ಮುಖದಲ್ಲೇ ಸಮಸ್ಯೆಗಳನ್ನು ಬಗೆಹರಿಸಿದರು.
ಹೆಬ್ರಿ ಗೋಪಾಲ ಭಂಡಾರಿ ಅಭಿವಾನಿ ವೇದಿಕೆ ಮತ್ತು ಸಾವಾಜಿಕ ಟ್ರಸ್ಟ್ ಪದಾಧಿಕಾರಿಗಳು, ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ವಾದಿರಾಜ ಶೆಟ್ಟಿ, ವರಂಗ ಲಕ್ಷ್ಮಣ ಆಚಾರ್, ಕಿರಣ್ ತೋಳಾರ್, ಭೋಜ ಕುಲಾಲ್, ಎಚ್.ಜನಾರ್ದನ್, ಅಣ್ಣಪ್ಪ ಕುಲಾಲ್, ಮುರ್ಸಾಲು ಮೋಹನದಾಸ ನಾಯಕ್, ಶಶಿಕಲಾ ಡಿ.ಪೂಜಾರಿ ಮುದ್ರಾಡಿ, ಸಂತೋಷ್ ನಾಯಕ್ ಕನ್ಯಾನ, ನಿತೀಶ್ ಎಸ್.ಪಿ., ಬಿಜೆಪಿ ಹೆಬ್ರಿ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪುರ ಸುರೇಶ ಶೆಟ್ಟಿ, ಬಿಜೆಪಿ ಪ್ರಮುಖರಾದ ಜ್ಯೋತಿ ಹರೀಶ ಪೂಜಾರಿ, ಅಮೃತ್ ಕುವಾರ್ ಶೆಟ್ಟಿ, ಪ್ರಸನ್ನ ಕುವಾರ್ ಶೆಟ್ಟಿ, ಸುಧಾಕರ ಹೆಗ್ಡೆ ಮೊದಲಾದವರಿದ್ದರು.

ಸರ್ಕಾರ ಗುರಿ ನಿಗದಿ ಪಡಿಸಿದ ಎಲ್ಲಾ ಕೆಲಸಗಳ ನಡುವೆಯೂ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೆ ಕಾರ್ಯವನ್ನು ನಡೆಸುತ್ತಿದ್ದೇವೆ. ಅದು ಕೂಡ ಶ್ರೀವಾಗಿ ಮುಕ್ತಾಯಗೊಳ್ಳಲಿದೆ.

— ಎಸ್.ಎ.ಪ್ರಸಾದ್ ಹೆಬ್ರಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net