

ಮೇಲ್ಭಾಗದಿಂದ ಹರಿಯುವ ನೀರು ತಡೆಗಟ್ಟಲು ಪೈಪ್ ಬ್ಲಾಕ್ ಆಗಿದ್ದರಿಂದ ಚರಂಡಿ ಕಾಮಗಾರಿಗಾಗಿ ಮೆಟ್ಟಿಲುಗಳನ್ನು ತೆಗೆಯಲಾಗಿತ್ತು. ಆದರೆ ಅಲ್ಲಿನ ವಾಸ್ತವ ಸಮಸ್ಯೆ ಬಗ್ಗೆ ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ರಸ್ತೆ ಅಭಿವೃದ್ಧಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತಿದೆ. ಆದರೆ ಒಂದು ಸಣ್ಣ ದಾರಿಯನ್ನು ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ. ಮುಖ್ಯರಸ್ತೆ ಅಗೆದ ಬಳಿಕ ಮೆಟ್ಟಿಲು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ದುರಂತ.
ನಾವು ಸ್ವಂತ ಖರ್ಚಿನಲ್ಲಿ ಮೆಟ್ಟಿಲು ನಿರ್ಮಿಸಿಕೊಂಡಿದ್ದೆವು, ಅದನ್ನು ಪಿಡಬ್ಲ್ಯುಡಿಯವರು ಅಗೆದು ಬಿಟ್ಟಿದ್ದಾರೆ. ಕಾಯಿಲೆ ಬಿದ್ದರೆ ಮುಖ್ಯರಸ್ತೆಗೆ ಬರಲು ಸಾಧ್ಯವಾಗುತ್ತಿಲ್ಲ, ಇಲಾಖೆಗಳ ಹಾರಿಕೆ ಉತ್ತರದಿಂದ ನಾವು ನರಕಯಾತನೆ ಅನುಭವಿಸುತ್ತಿದ್ದೇವೆ.