ಜನಸಂಖ್ಯಾ ಶಾಸ್ತ್ರದ ಬದಲಾವಣೆಗಳನ್ನು ಅನೇಕ ಆಯಾಮಗಳಲ್ಲಿ ವಿಶ್ಲೇಷಿಸುವ ಅಗತ್ಯವಿದೆ. ಕಳೆದ 5 ವರ್ಷಗಳ ಸರ್ಕಾರಿ ಅಂಕಿಅಂಶಗಳನ್ನು ಗಮನಿಸಿದರೆ ಪ್ರಥಮ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಶೇ.50ಕ್ಕಿಂತ ಹೆಚ್ಚು ಕಡಿಮೆಯಾಗಿದೆ. 2021&22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 16,279 ಮಕ್ಕಳು ಹೊಸದಾಗಿ ಮೊದಲನೇ ತರಗತಿಗೆ ದಾಖಲಾಗಿದ್ದರು. 2022&23ರಲ್ಲಿ 14166 ಮತ್ತು 2023&24ರಲ್ಲಿ 14073 ಮಕ್ಕಳು, 2.24&25ನೇ ಸಾಲಿನಲ್ಲಿ 13821 ಮಕ್ಕಳು, 2025&26ನೇ ಸಾಲಿನಲ್ಲಿ 11300 ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆದಿದ್ದರು. 2026&27ನೇ ಸಾಲಿನಲ್ಲಿ ಈ ಪ್ರಮಾಣ ತೀರಾ ಇಳಿಕೆಯಾಗಿದ್ದು, ಜೂನ್ ತಿಂಗಳ ಅಂಕಿಅಂಶ ಪ್ರಕಾರ ಜಿಲ್ಲೆಯಾದ್ಯಂತ ಒಟ್ಟು 7256 ವಿದ್ಯಾರ್ಥಿಗಳು 1ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಖಾಸಗಿ ಶಾಲೆಗಳಿಗೆ 5,974 ಮಕ್ಕಳು, ಸರ್ಕಾರಿ ಶಾಲೆಗಳಿಗೆ 3,063 ಮಕ್ಕಳು, ಅನುದಾನಿತ ಶಾಲೆಗಳಿಗೆ ಕೇವಲ 565 ಮಕ್ಕಳು ಸೇರ್ಪಡೆಯಾಗಿದ್ದಾರೆ. ಇದು ಮಕ್ಕಳ ಜನನ ಪ್ರಮಾಣ ಇಳಿಕೆಯಾಗುತ್ತಿರುವ ಸ್ಪಷ್ಟ ಮುನ್ಸೂಚನೆಯಾಗಿದೆ.