

ಬೆಳ್ತಂಗಡಿ: ತಾಲೂಕಿನಲ್ಲಿ ಮಳೆಯಿಂದ ಉಂಟಾಗಬಹುದಾದ ಅಪಾಯಗಳಿಗೆ ಸಕಾಲಕ್ಕೆ ನೆರವು ನೀಡಲು ಎನ್‌ಡಿಆರ್‌ಎಫ್ ತಂಡ ಬೆಳ್ತಂಗಡಿಗೆ ಆಗಮಿಸಿದೆ. ಸುಮಾರು 20 ಮಂದಿಯ ಈ ತಂಡ ಅಗತ್ಯ ಸಲಕರಣೆಗಳನ್ನು ಹೊಂದಿದ್ದು, ಅಪಾಯದ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಲಿದೆ. ಲಾಯಿಲ ಗ್ರಾಮ ಗುರಿಂಗಾನದ ಎಂಟು ಹಾಗೂ ಪುತ್ರಬೈಲಿನ 6 ಕುಟುಂಬಗಳನ್ನು ಎನ್‌ಡಿಆರ್‌ಎಫ್ ತಂಡ ಸ್ಥಳಾಂತರಿಸಿತು.