ಮಾಧ್ಯಮ ಹಬ್ಬದಲ್ಲಿ ನವೀನ್ ಸುವರ್ಣಗೆ ಗೌರವ

 ‘ಮಾಧ್ಯಮ ಹಬ್ಬ’ ಕಾರ್ಯಕ್ರಮದಲ್ಲಿ ವಿಡಿಯೋ ಜರ್ನಲಿಸ್ಟ್, ಮೂಡುಬಿದಿರೆ ಬಿರಾವು ಮೂಲದ ನವೀನ್ ಸುವರ್ಣ ಅವರನ್ನು ಗೌರವಿಸಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮೊದಲಾದವರಿದ್ದರು.
‘ಮಾಧ್ಯಮ ಹಬ್ಬ’ ಕಾರ್ಯಕ್ರಮದಲ್ಲಿ ವಿಡಿಯೋ ಜರ್ನಲಿಸ್ಟ್, ಮೂಡುಬಿದಿರೆ ಬಿರಾವು ಮೂಲದ ನವೀನ್ ಸುವರ್ಣ ಅವರನ್ನು ಗೌರವಿಸಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪತ್ರಿಕಾ ದಿನಾಚರಣೆ ಅಂಗವಾಗಿ ಮೂಡುಬಿದಿರೆ ಪ್ರೆಸ್ ಕ್ಲಬ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಿದ್ದ ‘ಮಾಧ್ಯಮ ಹಬ್ಬ’ ಕಾರ್ಯಕ್ರಮದಲ್ಲಿ ವಿಡಿಯೋ ಜರ್ನಲಿಸ್ಟ್, ಮೂಡುಬಿದಿರೆ ಬಿರಾವು ಮೂಲದ ನವೀನ್ ಸುವರ್ಣ ಅವರನ್ನು ಗೌರವಿಸಲಾಯಿತು.
ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸನ್ಮತ್ ಎಸ್.ಆಚಾರ್ಯ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅಮೋಘ್ ಹೆಗ್ಡೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಕೆ.ಅಭಯಚಂದ್ರ ಉದ್ಘಾಟಿಸಿದರು. ಮಂಗಳೂರಿನ ಫೊರೆನ್ಸಿಕ್ ಇನ್ವೆಸ್ಟಿಗೇಟರ್ ಸಂಸ್ಥೆ ಶ್ರವಣ್ ಕುಮಾರ್ ಯು.ಕೆ. ‘ಎ.ಐ.ಯಿಂದ ಪತ್ರಕರ್ತರಿಗಿರುವ ಅವಕಾಶಗಳು ಮತ್ತು ಸವಾಲುಗಳು’ ವಿಷಯದ ಕುರಿತು ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆ ಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸ ನೀಡಿದರು.
ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ರಾಜ್ಯ ಪತ್ರಕರ್ತರ ಸಂಘ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಬಿಜೆಪಿ ಮುಖಂಡ ಸುದರ್ಶನ ಎಂ., ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಪ್ರಸನ್ನ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಹರೀಶ್ ಕೆ.ಆದೂರು ವಂದಿಸಿದರು. ಅಶ್ರ್ ವಾಲ್ಪಾಡಿ ನಿರೂಪಿಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ, ಸಂಘ ಕಾರ್ಯದರ್ಶಿ ಜೈಸನ್ ತಾಕೊಡೆ, ಸದಸ್ಯರಾದ ಯಶೋಧರ ಬಂಗೇರ, ರಾಘವೇಂದ್ರ ಶೆಟ್ಟಿ, ಶರತ್ ದೇವಾಡಿಗ, ಪುನೀತ್, ಕಚೇರಿ ನಿರ್ವಾಹಕ ಪ್ರಸನ್ನ ಸಚ್ಚರಿಪೇಟೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net