ಉಡುಪಿ ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ

ಜಿಲ್ಲೆಯಾದ್ಯಂತ ಶಕ್ತಿ ದೇವತೆ ಆರಾಧನೆ ನವರಾತ್ರಿ ಹಬ್ಬದ ಸಂಭ್ರಮ ಪ್ರಾರಂಭವಾಗಿದೆ. ಭಾನುವಾರ ಮೊದಲ ದಿನ ಪ್ರಮುಖ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ಸರಿತಿ ಸಾಲಿನಲ್ಲಿ ದೇವಿಯ ದರ್ಶನ ಪಡೆದರು.
navaratri
ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ನವರಾತ್ರಿಯ ಪ್ರಯುಕ್ತ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಧರ್ನುಧಾರಿ ದುರ್ಗೆಯ ಅಲಂಕಾರ ನೆರವೇರಿಸಿದರು.
Published on: 

ಉಡುಪಿ: ಜಿಲ್ಲೆಯಾದ್ಯಂತ ಶಕ್ತಿ ದೇವತೆ ಆರಾಧನೆ ನವರಾತ್ರಿ ಹಬ್ಬದ ಸಂಭ್ರಮ ಪ್ರಾರಂಭವಾಗಿದೆ. ಭಾನುವಾರ ಮೊದಲ ದಿನ ಪ್ರಮುಖ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ಸರಿತಿ ಸಾಲಿನಲ್ಲಿ ದೇವಿಯ ದರ್ಶನ ಪಡೆದರು.

ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನ, ಅಂಬಲಪಾಡಿ ಮಹಾಕಾಳಿ ಜನಾರ್ದನ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ನೀಲಾವರ ಮಹಿಷಮರ್ಧಿನಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು, ಚಂಡಿಕಾ ಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.

ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ನವರಾತ್ರಿಯ ಪ್ರಯುಕ್ತ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಧರ್ನುಧಾರಿ ದುರ್ಗೆಯ ಅಲಂಕಾರ ನೆರವೇರಿಸಿದರು.

ಕದಿರುಕಟ್ಟುವ ಕಾರ್ಯ

ಉಡುಪಿ ಶ್ರೀ ಅನಂತೇಶ್ವರ, ಚಂದ್ರಮೌಳೀಶ್ವರ, ತೆಂಕಪೇಟೆಯ ಲಕ್ಷಿ$್ಮವೆಂಕಟೇಶ ದೇವಸ್ಥಾನ, ನವರಾತ್ರಿ ಪ್ರಥಮ ದಿನ ಕದಿರುಕಟ್ಟುವ ಕಾರ್ಯ ಸಕಲ ಧಾರ್ಮಿಕ ವಿದಿವಿಧಾನಗಳೊಂದಿಗೆ ನಡೆಯಿತು. ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮೊದಲ ದಿನ ನವರಾತ್ರಿಯ ಅಂಗವಾಗಿ ಗದ್ದೆಯಿಂದ ಕದಿರು ಭತ್ತದ ತೆನೆಯನ್ನು ಪಲ್ಲಕಿಯಲ್ಲಿ ತಂದು ದೇವಳದಲ್ಲಿ ಧಾನ್ಯಲಕ್ಷಿ$್ಮ ಪೂಜೆ ಸಲ್ಲಿಸಿ ನೆರೆದ ಭಕ್ತರಿಗೆ ವಿತರಣೆ ಮಾಡಲಾಯಿತು.

ಪರ್ಕಳದಲ್ಲಿ ತೆನೆಹಬ್ಬ

ಪರ್ಕಳ ಮಾಹಾಲಿಂಗೇಶ್ವರ, ಮಹಾಗಣಪತಿ. ಅಯ್ಯಪ್ಪ ದೇವಸ್ಥಾನದಲ್ಲಿ ತೆನೆ ಹಬ್ಬ ನಡೆಯಿತು. ಕದಿರು, ಮಾವಿನ ಎಲೆ ಹಲಸಿನ ಎಲೆ, ಕದಿರು ಕಟ್ಟಲು ದಾರ, ಸಾಂಪ್ರದಾಯವಾಗಿ ಬಳಸುವ ಎಲ್ಲಾ ವಸ್ತುಗಳನ್ನು ಒಂದೇ ಕಡೆ ಸೇರಿಸಿ ಕದಿರುಕಟ್ಟಲಾಯಿತು. ಈ ಸಂದರ್ಭದಲ್ಲಿ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ತೆನೆ ಪಡೆದುಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಸ್ಥಾಯೀ ಸಮಿತಿ ಅಧ್ಯಕ್ಷ ಮುರಳಿಧರ ನಕ್ಷತ್ರಿ, ಪರ್ಕಳ ನಟರಾಜ್​, ಅರ್ಚಕರಾದ ವೇದಮೂರ್ತಿ ಪದ್ಮನಾಭ ಭಾಯರಿ, ನಾರಾಯಣ ಭಟ್​, ಶ್ರೀಪತಿ ಉಪಾಧ್ಯಾಯ, ಸಮಿತಿಯ ಪದಾಧಿಕಾರಿಗಳಾದ ಸುಧಾಕರ ಪೂಜಾರಿ ಪರ್ಕಳ, ಸುಖಾನಂದ ಶೆಟ್ಟಿಗಾರ್​, ಸುಧೀರ್​ ಶೆಟ್ಟಿ ಕೆಳಪರ್ಕಳ, ನಾಗೇಶ ನಾಯಕ, ಸಮಾಜ ಸೇವಕಿ ರಮ್ಯ ರಮಾನಂದ ನಾಯಕ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net