ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾಶಿವ ಕಟ್ಟೆಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆ ಸಿಆರ್‌ಪಿ ಸವಿತಾ, ಹಳೇ ವಿದ್ಯಾರ್ಥಿ ಆಲಿಯಬ್ಬ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ನೇತ್ರಾವತಿ, ಕೆಪಿಸಿಸಿ ಕಾರ್ಯದರ್ಶಿ ಪೃಥ್ವಿರಾಜ್ ಆರ್.ಕೆ., ನಿವೃತ್ತ ಶಿಕ್ಷಕಿ ಮೋಹಿನಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ, ಶಿಕ್ಷಕರಾದ ಮೀನಾಕ್ಷಿ, ಭವ್ಯಾ, ಕುಪ್ಪೆಪದವು ಅರಮನೆ ಶಾಲೆ ಮುಖ್ಯ ಶಿಕ್ಷಕ ಬಾಬು ಪಿ.ಎಂ., ಶಿಕ್ಷಕರಾದ ಮಾರ್ಕ್ ಮೆಂಡೋನ್ಸ, ಉದಯ ಕುಮಾರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಅರುಣಾ ಶೆಟ್ಟಿ, ಹಸನಬ್ಬ ಮತ್ತಿತರರು ಇದ್ದರು. ಮೋಹನದಾಸ್ ಮರಕಡ, ವೇದಿಕೆ ಸಜ್ಜುಗೊಳಿಸಿದ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ದಿವ್ಯಾ ಸ್ವಾಗತಿಸಿದರು. ಶಿಕ್ಷಕಿ ರೇಷ್ಮಾ ನಿರೂಪಿಸಿದರು. ಸೆಲಿಕತ್ ವಂದಿಸಿದರು.