ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಇಲಾಖೆ ಹೊರತುಪಡಿಸಿ 47 ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಅರಣ್ಯ ಇಲಾಖೆ ಮತ್ತು ಮೆಸ್ಕಾಂ, ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟಿನ ಬಾಗಿಲು ತೆರವು ಮಾಡುವಂತೆ, ಮಳೆಗಾಲದ ಮುನ್ನೆಚ್ಚರಿಕೆ ಕುರಿತು, ನಾನಾ ಭಾಗದಲ್ಲಿ ಇರುವ ಸಮಸ್ಯೆಗಳು, ಬಿತ್ತನೆ ಬೀಜಗಳ ಸಂಗ್ರಹ, ನೀರು ಸರಬರಾಜು ವಿತರಣೆಯಲ್ಲಿ ತಾರತಮ್ಯ, ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ, ವಿದ್ಯುತ್ ಬಿಲ್ ಹೆಚ್ಚಳ ಮತ್ತು ಕಂದಾಯ ಇಲಾಖೆಯಲ್ಲಿರುವ ಕೆಲವು ನ್ಯೂನತೆ, ಕೆಎಸ್‌ಆರ್‌ಟಿಸಿ ಬಸ್ ಗ್ರಾಮೀಣ ಭಾಗದಲ್ಲಿ ಬೆಳಗಿನ ಹೊತ್ತು ಶಾಲಾ ಕಾಲೇಜು ಸಮಯದಲ್ಲಿ ಸಂಚರಿಸದೆ ಖಾಸಗಿ ಬಸ್‌ನವರೊಂದಿಗೆ ಶಾಮೀಲಾದ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.