ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಜಿಲ್ಲೆಯ ಕ್ರೀಡಾಪಟುಗಳು

ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ನಿತ್ಯಾನಂದ್​ ವಿ. ಗಾಂವ್ಕರ್​, ಗಣನಾಥ್​ ಶೆಟ್ಟಿ, ಡಾ.ಜಯಕರ್​ ಶೆಟ್ಟಿ, ರಾಜೇಶ್​ ಕೆ.ಸಿ., ಬಸವರಾಜ್​, ಶಿವರಾಂ ಶೆಟ್ಟಿ, ಡಾ.ರೋಶನ್​ ಶೆಟ್ಟಿ, ಶಾಲಿನಿ, ಶ್ರೀದೇವಿ ಇತರರಿದ್ದರು.
ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ನಿತ್ಯಾನಂದ್​ ವಿ. ಗಾಂವ್ಕರ್​, ಗಣನಾಥ್​ ಶೆಟ್ಟಿ, ಡಾ.ಜಯಕರ್​ ಶೆಟ್ಟಿ, ರಾಜೇಶ್​ ಕೆ.ಸಿ., ಬಸವರಾಜ್​, ಶಿವರಾಂ ಶೆಟ್ಟಿ, ಡಾ.ರೋಶನ್​ ಶೆಟ್ಟಿ, ಶಾಲಿನಿ, ಶ್ರೀದೇವಿ ಇತರರಿದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

* ಜಿಲ್ಲಾ ಮಟ್ಟದ ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟನೆ

ಉಡುಪಿ: ವಿಶ್ವವೇ ಕಂಡ ಅತ್ಯದ್ಭುತ ಹಾಕಿ ಕ್ರೀಡಾಪಟು, ದಂತಕಥೆ ಮೇಜರ್​ ಧ್ಯಾನ್​ಚಂದ್​ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಕ್ರೀಡಾ ಸಾಧನೆಗಳನ್ನು ಜಿಲ್ಲೆಯ ಯುವ ಕ್ರೀಡಾಪಟುಗಳು ಅರಿತು, ಸ್ಫೂರ್ತಿ ಪಡೆಯಬೇಕು. ಒಲಿಂಪಿಕ್​ನಲ್ಲಿ ಸ್ವರ್ಣ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾಲೇಜಿನ ಐಕ್ಯೂಎಸಿ ಕ್ರೀಡಾ ವಿಭಾಗ ಹಾಗೂ ವಿವಿಧ ರಾಷ್ಟ್ರೀಯ ಸಂಟನೆಗಳ ಸಹಕಾರದಲ್ಲಿ ಶನಿವಾರ (ಆ.29) ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗೆ ಮೀಸಲಿಡಿ ಸಮಯ

ಕೇಂದ್ರ ಬಿಜೆಪಿ ಸರ್ಕಾರವು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಖೇಲೋ ಇಂಡಿಯಾ ಮೂಲಕ ದೇಶದ ಮೂಲೆ ಮೂಲೆಯಲ್ಲಿರುವ ಕ್ರೀಡಾಪಟುಗಳನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಖೇಲೆಗಾ ಭಾರತ್​-ಜೀತೇಗಾ ಭಾರತ್​, ಏಕ್​ ಘಂಟ್​ ಖೇಲ್​ ಕೇ ಮೈದಾನ್ಮೆ ಕಾರ್ಯಕ್ರಮವು ವಿದ್ಯಾರ್ಥಿಗಳ ಶಿಕ್ಷಣದೊಂದಿಗೆ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರತಿದಿನ ಒಂದುತಾಸು ಕ್ರೀಡೆಗಾಗಿ ಸಮಯ ಮೀಸಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ಯಶ್​ಪಾಲ್​ ಸಲಹೆ ನೀಡಿದರು.
ಕಾಲೇಜ್​ನ ಪ್ರಾಂಶುಪಾಲ ನಿತ್ಯಾನಂದ್​ ವಿ. ಗಾಂವ್ಕರ್​, ಫಿಟ್​ ಇಂಡಿಯಾ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ರೆಡ್​ ಕ್ರಾಸ್​ ಸಂಸ್ಥೆಯ ಕಾರ್ಯದರ್ಶಿ ಗಣನಾಥ್​ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ಡಾ.ಜಯಕರ್​ ಶೆಟ್ಟಿ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್​ ಇನ್​ ಕಮಾಂಡೆಂಟ್​ ರಾಜೇಶ್​ ಕೆ.ಸಿ., ಹೋಂ ಗಾರ್ಡ್ಸ್​ ಇನ್​ಸ್ಪೆಕ್ಟರ್​ ಬಸವರಾಜ್​, ರೆಡ್​ಕ್ರಾಸ್​ ಖಜಾಂಜಿ ಶಿವರಾಂ ಶೆಟ್ಟಿ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಶಾಲಿನಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀದೇವಿ ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ ಶೆಟ್ಟಿ ಸ್ವಾಗತಿಸಿದರು. ರೋವರ್ಸ್​ ಆ್ಯಂಡ್​ ರೇಂಜರ್ಸ್​ನ ಸಂಚಾಲಕ ಮೆರ್ವಿನ್​ ವಿಕ್ಟರ್​ ಡಿಸೋಜ ವಂದಿಸಿದರು. ಎನ್​ಎಸ್​ಎಸ್​ ಅಧಿಕಾರಿ ಬಾಲರಾಜ್​ ಡಿ.ಬಿ. ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net