ಕೋಟ ಪಡುಕರೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ಯಶೋದಾ ಮಾತನಾಡಿದರು.
ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ಯಶೋದಾ ಮಾತನಾಡಿದರು.
Published on
ಕೋಟ: ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಐಕ್ಯೂಎಸಿ ಆಶ್ರಯದಲ್ಲಿ ಗ್ರಂಥಾಲಯ ಸಪ್ತಾಹ ಕಾಲೇಜಿನ ಗ್ರಂಥಾಲದಯಲ್ಲಿ ನಡೆಯಿತು. ಸಪ್ತಾಹದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ, ಪುಸ್ತಕ ಪ್ರದರ್ಶನ, ಜ್ಞಾಪಕ ಶಕ್ತಿ, ಪುಸ್ತಕ ವಿಮರ್ಶೆ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುವಾನ ವಿತರಿಸಲಾಯಿತು.
ಅಧ್ಯಾಪಕ ಭೂಪಣ ಪ್ರಶಸ್ತಿ ಪುರಸ್ಕೃತರಾದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ಯಶೋದಾ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಪ್ರೊ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪ್ರೊ.ರಮೇಶ ಆಚಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಪ್ರೊ.ಸುಬ್ರಹ್ಮಣ್ಯ ಎ., ಐಕ್ಯೂಎಸಿ ಸಂಚಾಲಕಿ, ಗ್ರಂಥಾಲಯ ಪ್ರತಿನಿಧಿ ಪ್ರತೀಕ್ಷಾ ಉಪಸ್ಥಿತರಿದ್ದರು.
ಕಾಲೇಜು ಗ್ರಂಥಪಾಲಕಿ ರಾಧಾ ಕೆ. ಸ್ವಾಗತಿಸಿದರು. ರಕ್ಷಾ ಮತ್ತು ದುರ್ಗಾಪ್ರಸಾದ್ ಪುಸ್ತಕ ವಿಮರ್ಶೆ ಮಾಡಿದರು. ಶ್ರದ್ದಾ ವಂದಿಸಿದರು. ತ್ರಿಷಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net